ಬೆಂಗಳೂರು –
ಸೆಕ್ಸ್ ಸಿಡಿ ವಿಚಾರ ಕುರಿತು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಇತ್ತ ತನಿಖೆ ಮಾಡುತ್ತಿ ಸಿಡಿ ಸಂತ್ರಸ್ತೆಯ ಹಿಂದೆ ಒಂದು ಲವ್ ಕಹಾನಿಯ ಕತೆ ಇದೆ ಎನ್ನುವ ಗುಟ್ಟು ರಟ್ಟಾಗಿದೆ.
ಹೌದು ಸಿಡಿ ಕೇಸ್ ನಲ್ಲಿ ಸಂತ್ರಸ್ತೆಯಾಗಿರುವ ಯುವತಿಯ ಬಗ್ಗೆ ಈಗ ಒಂದು ಕುತೂಹಲಕಾರಿ ಮಾಹಿತಿಗಳು ಲಭ್ಯವಾಗಿವೆ. ಉತ್ತರ ಕರ್ನಾಟಕದ ವಳಾದಂತ ಸಂತ್ರಸ್ತ ಯುವತಿ, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾಳಂತೆ.
ಇಂತಹ ಯುವತಿ, ಐದು ವರ್ಷಗಳಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿರುವ ಲವ್ ಕಹಾನಿ ಈಗ ಬೆಳಕಿಗೆ ಬಂದಿದ್ದು ತನಿಖೆಯಿಂದ ಪೊಲೀಸರಿಗೆ ತಿಳಿದು ಬಂದಿದೆ.
ಯುವಕನೊಂದಿಗೆ ಮದುವೆಯ ವಿಚಾರವಾಗಿಯೂ 3 ತಿಂಗಳ ಹಿಂದಷ್ಟೇ ಮಾತುಕತೆ ಕೂಡ ನಡೆಸಲಾಗಿ ತ್ತಂತೆ. ಯುವಕ ತಾನು ಪ್ರೀತಿಸುತ್ತಿದ್ದಂತ ಯುವತಿ ಯನ್ನು ಮದುವೆಯಾಗಲು ನಿರ್ಧರಿಸಿ ದ್ದಾಗಿಯೂ ತಿಳಿಸಿದ್ದನಂತೆ. ಹೀಗಾಗಿ ಯುವತಿ ಯೊಂದಿಗೂ ಯುಕನ ಮನೆಯವರು ಒಂದೆರಡು ಬಾರಿ ಮಾತನಾಡುತ್ತಿದ್ದರಂತೆ.
ಈವರೆಗೆ ತನಿಖೆ ಮಾಡಿರುವ ಪೊಲೀಸರಿಗೆ ಈ ಎಲ್ಲಾ ಮಾಹಿತಿಯು ಎಸ್ ಐಟಿ ತಂಡಕ್ಕೆ ಲಭ್ಯವಾಗಿದ್ದು, ಯುವತಿಯ ಸಂಪರ್ಕದಲ್ಲಿದ್ದಂತ ಯುವಕನ ಮನೆಯವರು, ಸಂಬಂಧಿಕರು, ಸ್ನೇಹಿತರು ಹಾಗೂ ಕುಟುಂಬಸ್ಥರ ಮನೆ ಬಾಗಿಲಿಗೆ ಪೊಲೀಸರು ವಿಚಾರಣೆಗಾಗಿ ನೋಟಿಸ್ ಅಂಟಿಸಿ ಬಂದಿದ್ದಾರೆ.ಆದರೂ ಇನ್ನೂ ಯುವತಿ ಮಾತ್ರ ಎಲ್ಲಿದ್ದಾಳೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.