ಬೆಳಗಾವಿ –
ಇದೊಂದು ಸರ್ಕಾರಿ ಶಾಲೆಯೊಂದರ ಚಿತ್ರಣ.ಸರ್ಕಾರ ದಿಂದ ಎಲ್ಲವೂ ಇದ್ದರೂ ಕೂಡಾ ಕಳೆದ ಹದಿನೈದು ದಿನ ಗಳಿಂದ ಬಿಸಿಯೂಟ ನಿಂತುಕೊಂಡಿದ್ದು ಹೀಗಾಗಿ ಶಾಲೆಗೆ ಬರುವ ವಿದ್ಯಾರ್ಥಿ ಗಳು ಮನೆಯಿಂದಲೇ ಊಟ ವನ್ನು ತಗೆದುಕೊಂಡು ಬಂದು ಊಟ ವನ್ನು ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದ್ದು ಸಧ್ಯ ಕಂಡು ಬರುತ್ತಿದೆ.

ಹೌದು ಅಕ್ಷರದಾಸೋಹದ ಅಡಿಯಲ್ಲಿ ಸರ್ಕಾರಿ ಶಾಲೆ ಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಚಿಕ್ಕೋಡಿಯ ಜೋಡಕುರುಳಿ ಸರ್ಕಾರಿ ಶಾಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಸಿಯೂಟ ಬಂದ್ ಆಗಿದೆ. ಹೀಗಾಗಿ ಮನೆಯಿಂದಲೇ ಮಕ್ಕಳು ಊಟದ ಡಬ್ಬಿ ತಂದು ಊಟ ಮಾಡುತ್ತಿದ್ದಾರೆ.ಸುಮಾರು 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು 15 ದಿನಗಳಿಂದ ಅಕ್ಕಿ ಪೂರೈಕೆಯಾಗಿಲ್ಲ.ದಾಸ್ತಾನು ಕೊರತೆ ಬಗ್ಗೆ ಇಲಾಖೆ ಗಮನಕ್ಕೆ ಬಂದರೂ ಜಾಣ ಕುರುಡು ತೋರಿಸುತ್ತಿದ್ದಾರೆ ಎಂದು ಸ್ಥಳಿಯರು ಹಿಡಿಶಾಪ ಹಾಕಿದ್ದು ವಿದ್ಯಾರ್ಥಿ ಗಳ ಪರದಾಟ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ