ಬೆಳಗಾವಿ –
ಡಿಸೆಂಬರ್ 13 ರಿಂದ 24 ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಈಗಾಗಲೇ ಈ ಕುರಿತಂತೆ ಸಭಾಧ್ಯಕ್ಷರು ಷೋಷಣೆ ಮಾಡಿದ್ದು ಬೆಳಗಾವಿ ಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಕಾಲಕ್ಕೆ ಪ್ರತಿಭಟನೆ ಕೈಗೊಳ್ಳಲು ನಾಡಿನ ಶಿಕ್ಷಕರು ಸಿದ್ದರಾಗುತ್ತಿದ್ದಾರೆ.ಹೌದು ಈಗಾಗಲೇ ಈ ಕುರಿತಂತೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿರುವ ಶಿಕ್ಷಕರು ಪ್ರತಿಭಟನೆ ಮಾಡಿ ಮನವಿಯನ್ನು ಸಲ್ಲಿಸಲು ಪ್ಲಾನ್ ಮಾಡಿದ್ದಾರಂತೆ ಈ ಕುರಿತಂತೆ ಮುಂಚಿತವಾಗಿಯೇ ಬೆಳಗಾವಿ ಪೊಲೀಸ್ ಕಮೀಷನರ ಕಛೇರಿಯಲ್ಲಿ ಸಂಪರ್ಕ ಮಾಡಿ ಪ್ರತಿಭಟನೆಗೆ ಅರ್ಜಿಯನ್ನು ನೀಡಿ ಪೂರ್ವಾನು ಮತಿಯನ್ನು ಪಡೆದುಕೊಳ್ಳುವಂತೆಯೂ ಸೂಚನೆ ನೀಡಿದ್ದು
ಹೀಗಾಗಿ ಒಟಿಎಸ್ ವಿಚಾರದಲ್ಲಿ ಶಿಕ್ಷಕರು ಸದ್ದಿಲ್ಲದೇ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಸಿದ್ದರಾಗುತ್ತಿದ್ದು ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಹೋರಾಟಕ್ಕೆ ಕೈಜೋಡಿಸುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಆಂದೋಲನ ಆರಂಭಗೊಂಡಿದ್ದು ಕೂಗೂ ಜೋರಾಗಿ ಶಿಕ್ಷಕರು ಬೀದಿಗಿಳಿಯುವ ಮುನ್ನವೇ ಸರ್ಕಾರ ಶಿಕ್ಷಣ ಸಚಿವರು OTS ವಿಚಾರದಲ್ಲಿ ಸಂತೋಷದ ಸುದ್ದಿ ಯನ್ನು ನೀಡಿ ಇದನ್ನು ಪಡೆಯಲು ಸಕಾಲವೆಂದು ಹೋರಾ ಟಕ್ಕೆ ಕರೆ ಕೊಟ್ಟವರಿಗೆ ಸಿಹಿ ಸುದ್ದಿಯನ್ನು ನೀಡಬೇಕು ಇದರ ನಿರೀಕ್ಷೆಯಲ್ಲಿ ಹೋರಾಟಕ್ಕೆ ಕರೆ ಕೊಟ್ಟ ಶಿಕ್ಷಕರಿ ದ್ದಾರೆ.