ಹುಬ್ಬಳ್ಳಿ –
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯಲ್ಲಿ ಮನೆ ಮನೆಗೆ ತ್ರಿವರ್ಣ ಧ್ವಜ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಒಂದು ಪ್ರಚಾರ ವಾಹನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವರು ಚಾಲನೆ ನೀಡಿದರು.
ನಗರದಲ್ಲಿ ಬಿಜೆಪಿ ಹುಬ್ಬಳ್ಳಿ -ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಿಂದ ಹಮ್ಮಿಕೊಂಡಿದ್ದ ಮನೆ ಮನೆಯಲ್ಲಿ ತ್ರಿವರ್ಣ ಅಭಿಯಾನದ ಈ ಒಂದು ವಿಶೇಷ ಪ್ರಚಾರ ವಾಹನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಂಕೇತಿಕ ವಾಗಿ ಚಾಲನೆ ನೀಡಿದರು.ನಗರದ ತುಂಬೆಲ್ಲಾ ಈ ಒಂದು ವಾಹನವು ಸಂಚಾರ ಮಾಡಿ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿ ಪ್ರಚಾರವನ್ನು ಮಾಡಲಿದೆ.
ಇನ್ನೂ ಈ ಒಂದು ಸಮಯದಲ್ಲಿ ಶಾಸಕರಾದ ಜಗದೀಶ ಶೆಟ್ಟರ್,ಅರವಿಂದ ಬೆಲ್ಲದ,ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ,ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ,ಮಹಾನಗರ ಅಧ್ಯಕ್ಷ ಸಂಜಯ ಕಪಟಕರ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ,ವೀರಭದ್ರಪ್ಪ ಹಾಲಹರವಿ,ನಾಗೇಶ ಕಲಬುರ್ಗಿ,ಡಾ. ಕ್ರಾಂತಿಕಿರಣ, ಲಕ್ಷ್ಮೀಕಾಂತ ಘೋಡಕೆ,ಕೇಂದ್ರ ಸಚಿವರ ಆಪ್ತ ಕಾರ್ಯ ದರ್ಶಿ ಮಲ್ಲಿಕಾರ್ಜುನ ಪಾಟೀಲ.ಸೇರಿದಂತೆ ಹಲವರು ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಉಪಸ್ಥಿತ ರಿದ್ದರು.