ಬೆಂಗಳೂರು –
ಸರ್ಕಾರಿ ನೌಕರರನ್ನು ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಹೆದರಿಸುತ್ತಿದ್ದ ಇಬ್ಬರನ್ನು ಬಂಧನ ಮಾಡಲಾಗಿದೆ ಹೌದು ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಹಲವಾರು ಮಂದಿ ಸರಕಾರಿ ನೌಕರರಿಗೆ ವಂಚನೆ ಎಸಗುತ್ತಿದ್ದರು ಇಬ್ಬರನ್ನು ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಚಿಕ್ಕೋಡಿಯ ಸದಲಗದ ಮುರಿ ಗೆಪ್ಪಾ ನಿಂಗಪ್ಪ ಕುಂಬಾರ(56) ಮತ್ತು ಸಕಲೇಶಪುರದ ಮುಗುಳಿ ಗ್ರಾಮದ ರಜನಿಕಾಂತ್(46) ಎನ್ನುವವರಾಗಿ ದ್ದಾರೆ.ಮುರಿಗೆಪ್ಪಾ ವಿರುದ್ಧ ರಾಜ್ಯದ ವಿವಿಧೆಡೆ 40ಕ್ಕೂ ಹೆಚ್ಚು ಪ್ರಕರಣಗಳಿವೆ. ರಜನಿಕಾಂತ್ ವಿರುದ್ಧ ೬ ಪ್ರಕರಣ ಗಳು ದಾಖಲಾಗಿವೆ.ಇಬ್ಬರೂ ಎಸಿಬಿ ಅಧಿಕಾರಿಗಳ ಹೆಸರಿ ನಲ್ಲಿ ಸರಕಾರಿ ನೌಕರರಿಗೆ ಕರೆ ಮಾಡಿ ಬೆದರಿಸಿ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ದಂಧೆಯಲ್ಲಿ ನಿರತರಾಗಿದ್ದರು. ಇಬ್ಬರ ವಿರುದ್ಧ ಅಧಿಕಾರಿಗಳು ದೂರು ಸಲ್ಲಿಸಿದ್ದರು.