ಧಾರವಾಡ –
ಹುಬ್ಬಳ್ಳಿ ಧಾರವಾಡ ಮಧ್ಯದ ಹೊರವಲಯದಲ್ಲಿನ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತವಾಗಿದೆ. ಬೆಳ್ಳಂ ಬೆಳಿಗ್ಗೆ ಕಾರು ಖಾಸಗಿ ಬಸ್ ಅಪಘಾತವಾಗಿದ್ದ ಬೆನ್ನಲ್ಲೇ ಮಧ್ಯಾಹ್ನ ಮತ್ತೊಂದು ಅಪಘಾತವಾಗಿದೆ. ಬೈಕ್ ಮತ್ತು ಕ್ಯಾಂಟರ್ ನಡುವೆ ಈ ಒಂದು ಅಪಘಾತವಾಗಿದ್ದು ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿದ್ದಾರೆ.
ಹೌದು ಹುಬ್ಬಳ್ಳಿ ಧಾರವಾಡ ನಡುವಿನ ಹೆದ್ದಾರಿಯ ಮೈಕ್ರೋ ಫಿನಿಶ್ ಕಂಪನಿಯ ಬಳಿ ಅಪಘಾತವಾಗಿದೆ. ಧಾರವಾಡದ ಹೊರವಲಯದ ಪುನಾ ಬೆಂಗಳೂರು ಹೆದ್ದಾರಿಯಲ್ಲಿ ಈ ಒಂದು ಘಟನೆ ನಡೆದಿದೆ.ಕ್ಯಾಂಟರ್ ಬೈಕ್ ನಡುವೆ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಬೈಕ್ ನ ಇಬ್ಬರು ಸವಾರರು ಮೃತರಾಗಿದ್ದಾರೆ.ಇನ್ನೂ ರಸ್ತೆಯಲ್ಲಿಯೇ ಸಾವಿಗೀಡಾದ ಇಬ್ಬರು ಯುವಕರು ಮೃತ ಇಬ್ಬರು ಯುವ ಕರು ಧಾರವಾಡದ ಹೊಸ ಯಲ್ಲಾಪೂರ ನಿವಾಸಿಗಳಾ ಗಿದ್ದಾರೆ.
ಸ್ಥಳಕ್ಕೇ ಧಾರವಾಡದ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಕಿಲ್ಲರ್ ಹೆದ್ದಾರಿಯಲ್ಲಿ ಇದರೊಂದಿಗೆ ಸಾಕ್ಷಿಯಾಯಿತು ಮತ್ತೊಂದು ಭೀಕರ ಅಪಘಾತ ಸಾಲು ಸಾಲು ಅಪಘಾತಗಳು ನಡೆಯುತ್ತಿದ್ದರು ಕೂಡಾ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ ಜನಪ್ರತಿನಿಧಿಗಳು ಸರ್ಕಾರಗಳು.ಮೃತರ ಕುರಿತಂತೆ ಮಾಹಿತಿ ಕಲೆಹಾಕುತ್ತಿ ದ್ದಾರೆ ಪೊಲೀಸರು ಇತ್ತ ಅಪಘಾತದ ನಂತರ ಪೊಲೀಸ ರಿಗೆ ಶರಣಾಗಿದ್ದಾನೆ ಕ್ಯಾಂಟರ್ ಚಾಲಕ.