ಧಾರವಾಡ –
ಹೌದು ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯ ದರ್ಶಿಗಳು SDM ಸಂಸ್ಥೆಯ ಉಪಾಧ್ಯಕ್ಷರಾದ ಡಾ ನ ವಜ್ರಕುಮಾರವರು ನಿಧನರಾಗಿದ್ದಾರೆ.ಕಳೆದ ಕೆಲ ದಿನ ಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು 84ನೇ ವಯಸ್ಸಿನಲ್ಲಿ ಧಾರವಾಡದ ನಿವಾಸದಲ್ಲಿ ನಿಧನರಾಗಿದ್ದಾರೆ ಕಳೆದ 1973 ರಿಂದ ಇಲ್ಲಿಯವರೆಗೆ ಸಂಸ್ಥೆಯಲ್ಲಿ ನಿರಂತ ರವಾಗಿ ಕೆಲಸವನ್ನು ಮಾಡಿಕೊಂಡು ಬಂದಿದ್ದ ಇವರು ಸುಧೀರ್ಘವಾಗಿ ತಮ್ಮ ಇಳಿ ವಯಸ್ಸಿನಲ್ಲೂ ತಪ್ಪದೇ ಸಂಸ್ಥೆಯ ಶ್ರೇಯೊಬಿವೃದ್ದಿಗಾಗಿ ಹಗಲು ರಾತ್ರಿ ಎನ್ನದೇ ಕೆಲಸವನ್ನು ಮಾಡಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಧ್ಯ ಸಾವಿರಾರು ವಿದ್ಯಾರ್ಥಿಗಳು ಒಂದೇ ಸೂರಿನಡಿಯಲ್ಲಿ ಕಲಿಯುವಂತೆ ಸುಂದರವಾದ ಕ್ಯಾಂಪಸ್ ನ್ನು ನಿರ್ಮಾಣ ಮಾಡಿ ಜಿಲ್ಲಗೆ ರಾಜ್ಯಕ್ಕೆ ಮಾದರಿಯಾಗುವಂತಹ ಸಂಸ್ಥೆ ಯನ್ನು ಕಟ್ಟಿದ ಹೆಸರು ಇವರಿಗೆ ಸಲ್ಲುತ್ತಿದ್ದು ದೊಡ್ಡ ಸಂಸ್ಥೆ ಯನ್ನು ಸಾವಿರಾರು ಸಿಬ್ಬಂದಿಗಳನ್ನು ವಿದ್ಯಾರ್ಥಿಗಳನ್ನು ಬಿಟ್ಟು ನ ವಜ್ರಕುಮಾರ ಅವರು ಅಗಲಿದ್ದಾದರೆ.ಮೃತರ ಅಂತಿಮ ದರ್ಶನವು ಬೆಳಿಗ್ಗೆ 8 ಗಂಟೆಯಿಂದ 9.30 ರವರೆಗೆ ವಿದ್ಯಾಗಿರಿಯಲ್ಲಿರುವ ಸಂಸ್ಥೆಯ ಕ್ಯಾಂಪಸ್ ನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.ನಂತರ ಅವರ ಅಂತಿಮ ವಿಧಿವಿಧಾನಗಳು ಹುಟ್ಟುರಾದ ಯರ್ಮಾಳದಲ್ಲಿ ಜರುಗಲಿದೆ.ಇನ್ನೂ ಗೌರವಾರ್ಥವಾಗಿ JSS ಸಂಸ್ಥೆಗಳಿಗೆ ಎರಡು ದಿನಗಳ ಕಾಲ ರಜೆಯನ್ನು ಘೋಷಿಸಲಾಗಿದೆ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಗಳು.SDM ಸಂಸ್ಥೆಯ ಉಪಾಧ್ಯಕ್ಷರು ಆದ ಡಾ. ನ ವಜ್ರ ಕುಮಾರವರು ಬಿಟ್ಟು ಅಗಲಿದ್ದಕ್ಕೆ ಸಂಸ್ಥೆಯ ಸಾವಿರಾರು ಸಿಬ್ಬಂದಿಗಳು ವಿದ್ಯಾರ್ಥಿಗಳು ತೀವ್ರವಾದ ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.ಎಸ್ ಡಿಎಮ್ ಸಂಸ್ಥೆಯ ಪರವಾಗಿ ಡಾ ನಿರಂಜನಕುಮಾರ ಮತ್ತು ಪರಿವಾರದವರು ಹಾಗೇ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗರಾಜ ಕಲ್ಲಾಪೂರ.ಚನ್ನು ಬಾಳಗಿ ಸಂತೋಷ,ಇತ್ತ ಇಂಜನಿಯರಿಂಗ್ ಕಾಲೇಜಿನಿಂದ ಪ್ರಾಚಾರ್ಯರಾದ ಡಾ ಗೋಪಿನಾಥ್ ಮತ್ತು ಸರ್ವ ಸಿಬ್ಬಂದಿಗಳು ವಿದ್ಯಾರ್ಥಿಗಳು.ಇನ್ನೂ ಇತ್ತ ಜೆಎಸ್ ಎಸ್ ಸಂಸ್ಥೆಯ ವಿತ್ತಾಧಿಕಾರಿಗಳಾದ ಡಾ ಅಜೀತ್ ಪ್ರಸಾದ್ ಸೂರಜ್ ಜೈನ್,ಮಹಾವೀರ ಉಪಾದ್ಯಾಯ, ಜೀನಪ್ಪ ಕುಂದಗೋಳ,ಡಾ ಜೀನದತ್ತ ಹಡಗಲಿ,ವಿ ಕೆ ಬರಣಿ, ಜ್ಯೋತಿ ಕಟಗಿ,ವೈ ಜಯಮ್ಮ,ಶ್ರೀಮತಿ ಎಸ್ ಸಾಧನ, ಜ್ಯೋತಿ ಹಳ್ಳದ,ವಿದ್ಯಾ ಕೋಲ್ಹಾಪೂರಿ,ಉಷಾ ಸಂತೋಷ ಭರ್ಮಪ್ಪ ಭಾವಿ,ತ್ರಿವೇಣಿ,ವಿ ಎನ್ ದೇಸಾಯಿ,ಮೈನಾ ದಿವಟೆ,ಸುಧಾಮಣಿ ರಾವ್,ಚನ್ನು ನೂಲ್ವಿ ಸೇರಿದಂತೆ ಹಲವರು ತೀವ್ರವಾದ ಸಂತಾಪವನ್ನು ಸೂಚಿಸಿ ಭಾವ ಪೂರ್ಣ ನಮನ ಸಲ್ಲಿಸಿದ್ದಾರೆ.