This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ನಿವೃತ್ತ ಶಿಕ್ಷಕರಿಗೆ ಶುಭಕೋರಲು ಹಳ್ಳಿಗೆ ಆಗಮಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ – ಸಂತಸಗೊಂಡ ಶಿಕ್ಷಕ ಬಳಗ…..

WhatsApp Group Join Now
Telegram Group Join Now

ಧಾರವಾಡ –

ನಿವೃತ್ತ ಶಿಕ್ಷಕರಿಗೆ ಶುಭಕೋರಲು ಹಳ್ಳಿಗೆ ಆಗಮಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಹೌದು ಇಂತಹದೊಂದು ಹೃದಯಸ್ಪರ್ಶಿ ಕಾರ್ಯ ಕ್ರಮ ವೊಂದು ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಕಂಡು ಬಂದಿತು ನಿವೃತ್ತರಾದ ಮಾದರಿ ಕನ್ನಡ ಶಾಲೆಯ ಮುಖ್ಯ ಶಿಕ್ಷಕ ಕೆ ಎಲ್ ಕರ್ಚಕಟ್ಟಿ ಇವರು ಇಂದು ಸೇವಾ ನಿವೃತ್ತಿ ಹೊಂದಿದರು ಗ್ರಾಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಕರ್ಚಕಟ್ಟಿ ಗುರುಗಳ ನಿವೃತ್ತ ಜೀವನ ಸುಖಮಯವಾಗಿರಲಿ ಅಂತ ಹಾರೈಸಲು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹಳ್ಳಿಗಾಡಿನ ಶಾಲೆಗೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಶಿಕ್ಷಕರ ಮೇಲಿನ ಗೌರವದಿಂದ ಹಾಗೂ ಸ್ಥಳೀಯ ಜನಪ್ರತಿನಿಧಿ ಭೀಮಪ್ಪ ಕಾಸಾಯಿ ಇವರ ಕೋರಿಕೆಯ ಮೇರೆಗೆ ಆ ಗ್ರಾಮಕ್ಕೆ ಆಗಮಿಸಿ ನಿವೃತ್ತ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೂ ಇದೇ ವೇಳೆ ಮಾತನಾಡಿದ ಅವರು ಇತ್ತೀ ಚೆಗೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸು ವುದು ಇಂದು ತೀರ ಅಗತ್ಯವಿದೆ ಇಂದು ಮುಪ್ಪಿನ ತಂದೆ ತಾಯಿಗಳಿಗೆ ವೃದ್ದಾಶ್ರಮಕ್ಕೆ ಕಳಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ನಿಮಗೆ ಜೀವ ಕೊಟ್ಟ ತಂದೆ ತಾಯಿಗಳನ್ನು ಚನ್ನಾಗಿ ನೋಡಿಕೊಳ್ಳಿ ಅದರಲ್ಲೂ ತಾಯಿಗೆ ಎಷ್ಟು ಸೇವೆ ಮಾಡಿದರು ಕಡಿಮೆಯೇ ಎಂದರು‌

ಇನ್ನೂ ತಮ್ಮ ತಾಯಿಯ ಹೆಸರಿನಲ್ಲಿ ಅವ್ವ ಟ್ರಸ್ಟ್ ಮಾಡಿ ಜನೋಪಕಾರಿ ಕಾರ್ಯಗಳನ್ನು ಮಾಡುತ್ತಿ ರುವ ಕುರಿತು ತಿಳಿಸಿದರು.ಒಂಬತ್ತು ತಿಂಗಳ ಹೊತ್ತು ಹೆತ್ತು ಭೂಮಿಗೆ ನಮನ್ನು ತಂದು ಬೆಳಕು ತೋರಿಸಿದ ತಾಯಿಯನ್ನು ಪ್ರತಿಯೊಬ್ಬರೂ ಚನ್ನಾಗಿ ನೋಡಿ ಕೊಳ್ಳಿ ಎಂದು ಕಿವಿಮಾತು ಹೇಳಿದರು ದಿವ್ಯ ಸಾನಿದ್ಯ ವಹಿಸಿದ್ದ ಉಪ್ಪಿನ ಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಪರಮಪೂಜ್ಯ ಶ್ರೀ ಗುರು ವಿರುಪಾಕ್ಷ ಮಹಾಸ್ವಾಮಿಗಳು,ಶಿಕ್ಷಕ ವೃತ್ತಿ ಈ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು ವೃತ್ತಿ ಗೌರವವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ತುಂಬಾ ಅವಶ್ಯಕತೆ ಇದೆ ಎಂದರು

ಇನ್ನೂ ಒಬ್ಬ ವ್ಯಕ್ತಿ ಸ್ವರ್ಗ ಅಥವಾ ನರಕಕ್ಕೆ ಹೋಗುವ ಬಗ್ಗೆ ತಿಳಿದುಕೊಳ್ಳಲು ಆತ ತೀರಿಹೋ ದಾಗ ಮಾತ್ರ ಅದು ಗೊತ್ತಾಗಲಿದೆ ಹೇಗೆಂದರೆ ಅಂತ್ಯ ಸಂಸ್ಕಾರ ಮಾಡಿ ಮರಳಿ ಬರುವಾಗ ಜ‌ನ ಮಾತನಾಡುವ ಮಾತಿನಲ್ಲಿ ಆತನು ಸ್ವರ್ಗ ಅಥವಾ ನರಕ ಅಂತ ಗೊತ್ತಾಗಲಿದೆ ಹಾಗೆಯೇ ಒಬ್ಬ ಶಿಕ್ಷಕ ಒಳ್ಳೆಯ ಕಾರ್ಯ ಮಾಡಿದ ಬಗ್ಗೆ ಆತನ ಶಿಷ್ಯರು ಅವರ ನಿವೃತ್ತಿಯಾದಾಗ ಅವರನ್ನು ಗೌರವದಿಂದ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನು ಹೇಳು ವುದರ ಮೇಲೆ ಅವರ ಕಾರ್ಯದ ಬಗ್ಗೆ ತಿಳಿದು ಕೊಳ್ಳಲು ಸಾದ್ಯ ಎಂದರು.

ಇನ್ನೂ ಕರ್ಚಕಟ್ಟಿ ಗುರುಗಳ ಈ ಒಂದು ನಿವೃತ್ತ ಜೀವನಕ್ಕೆ ಶುಭಾಶಯ ಕೋರಲು ಕರ್ನಾಟಕ ಸರಕಾರದ ಸಭಾಪತಿಗಳು ಆಗಮಿಸಿರುವುದು ನಿಜಕ್ಕೂ ಇದು ಐತಿಹಾಸಿಕ ಸನ್ನಿವೇಶ ಎನ್ನುತ್ತಾ ಗ್ರಾಮದ ಜನರನ್ನು ಮತ್ತು ಸ್ಥಳಿಯ ಜನಪ್ರತಿನಿಧಿ ಗಳನ್ನು ಕೊಂಡಾಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾದ್ಯಕ್ಷರು ಸರ್ವ ಸದಸ್ಯರುಗಳ ಉಪಸ್ಥಿತಿಯಲ್ಲಿ 41 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಹೊರಟ್ಟಿ ಅವರನ್ನು ಗ್ರಾಮದ ವತಿಯಿಂದ ಸತ್ಕರಿಸಲಾಯಿತು ಅದೇ ರೀತಿ ಅಂಗನವಾಡಿ ಕಾರ್ಯಕರ್ತೆ ಗಂಗವ್ವ ಕಮ್ಮಾರ ಅವರನ್ನು ಸಹ ಸತ್ಕರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಸಿ ಆರ್ ಪಿ ರುದ್ರೇಶ ಕುರ್ಲಿ,ಗ್ರಾಮ ಪಂಚಾಯತಿ ಸದಸ್ಯರಾದ ಭೀಮಪ್ಪ ಕಾಸಾಯಿ,ಅಜ್ಜನಗೌಡ ಪಾಟೀಲ ಮಂಜುಳಾ ಹುಲಮನಿ,ಕಂಟೆಪ್ಪ ಕಲ್ಲೂರ ಮಹೇಶ ಯರಗಂಬಳಿಮಠ ಶಿವಯ್ಯ ಮೇಟಿ ನಾಗಪ್ಪ ಕರಲಿಂಗನವರ ವೀರೇಶ ಸೊಪೀನ ಮಡಿವಾಳಪ್ಪ ಉಳವಣ್ಣವರ ಈರಪ್ಪ ಬಳಿಗೇರ ಮಡಿವಾಳಪ್ಪ ಉಳ್ಳಾಗಡ್ಡಿ, ನಾಗಯ್ಯ ಮಠಪತಿ ಮುದುಕಪ್ಪ ಮೇದುನವರ, ಸಂತೋಷ ಹಿರೇಮಠ ಎಲ್ ಐ ಲಕ್ಕಮ್ಮನವರ, ಎ ಎಚ್ ನದಾಫ ಚಂದ್ರಶೇಖರ ತಿಗಡಿ, ಪೂಜಾರ ಜೋಶಿ ಕಾಳೆ ಬುಡಶೆಟ್ಟಿ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರು ಉಪಾದ್ಯಕ್ಷರು ಸರ್ವ ಸದಸ್ಯರು ಮುಂತಾದವರು ಇದ್ದರು, ಬಸವರಾಜ ಕರೂರ ನಿರೂಪಿಸಿ ವಂದಿಸಿದರು.


Google News

 

 

WhatsApp Group Join Now
Telegram Group Join Now
Suddi Sante Desk