This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಒತ್ತಾಯಿಸಿ ಪಾದಯಾತ್ರೆ – ಪ್ರತಿಭಟನೆ

WhatsApp Group Join Now
Telegram Group Join Now

ಧಾರವಾಡ –

ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಒತ್ತಾಯಿಸಿ ಪಾದಯಾತ್ರೆ ಪ್ರತಿಭಟನೆ ಮಾಡಲಾಯಿತು.ಹೋರಾಟಕ್ಕೆ ಕೆಲಗೇರಿ ಗ್ರಾಮಸ್ಥರು, ಲಾರಿ ಮಾಲೀಕರ ಸಂಘ, ಜನಜಾಗೃತಿ ಸಂಘ ಸೇರಿದಂತೆ ಹಲವರ ಬೆಂಬಲವನ್ನು ನೀಡಿದರು.

ಹೌದು ಹುಬ್ಬಳ್ಳಿ-ಧಾರವಾಡ ಅವಳಿನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೈಪಾಸ್ ಗಳಿಗೆ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ನಿಂದ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ವರೆಗೆ ಬರುವ ಬೈಪಾಸ್ ಗಳ ರಸ್ತೆ ಅಗಲೀಕರಣ, ತಾಂತ್ರಿಕ ನಿರ್ಮಾಣ, ಸರ್ವಿಸ್ ರೋಡ್ ನಿರ್ಮಾಣಕ್ಕೆ ಆಗ್ರಹಿಸಿ ಸೋಮವಾರ ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.ಈ ಪಾದಯಾತ್ರೆಗೆ ಕೆಲಗೇರಿ ಗ್ರಾಮಸ್ಥರು, ಲಾರಿ ಮಾಲೀಕರ ಸಂಘ, ಜನಜಾಗೃತಿ ಸಂಘ ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಕ್ಷಾತೀತವಾಗಿ ಬೆಂಬಲ ನೀಡಿದರು.

ಬೆಳಗ್ಗೆ 10.30ಕ್ಕೆ ನರೇಂದ್ರ ಬಳಿಯ ಟೋಲ್ ನಿಂದ ಇಟಿಗಟ್ಟಿ ಗ್ರಾಮದವರೆಗೆ ಆರಂಭಗೊಂಡ ಪಿ.ಎಚ್. ನೀರಲಕೇರಿಯವರ ಪಾದಯಾತ್ರೆಗೆ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ, ಸೇರಿದಂತೆ ಅನೇಕರು ಸಾಥ್ ನೀಡಿದರು.

ಇದೇ ವೇಳೆ ಕೆಲಗೇರಿ ಹಾಗೂ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಪಾದಯಾತ್ರೆಗೆ ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಬೈಪಾಸ್ ರಸ್ತೆಅಪಘಾತದಲ್ಲಿ ಪ್ರಾಣ ಕಳೆದುಕೊಂಡ 1200 ಅಮಾಯಕ ಜನರಿಗೆ ಶ್ರದ್ದಾಂಜಲಿ ಹಾಗೂ ಷಟ್ಪಥ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದರು.ಈ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಾಗೂ ವಿಶೇಷವಾಗಿ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ವಿರುದ್ದ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಈಗಲಾದರೂ ಎಚ್ಚೆತ್ತುಕೊಂಡು ಕಾಲಮಿತಿಯೊಳಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜನರ ಪ್ರಾಣ ಉಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾತನಾಡಿ, ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ಹೊರತು ಪಡಿಸಿದ ದೇಶದ ಎಲ್ಲಾ ಬೈಪಾಸ್ ಅಗಲೀಕರಣಗೊಂಡಿವೆ. ಆದರೆ, ಇದು ಮಾತ್ರ ಎರಡು ದಶಕಗಳು ಕಳೆದರೂ ಜಿಲ್ಲೆಯ ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದ ಅಭಿವೃದ್ದಿ ಕಾಣದಿರುವುದು ನೋವಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ, ಬೈಪಾಸ್ ಅಗಲೀಕರಣ, ನಿರ್ಮಾಣ, ನಿರ್ವಹಣೆ, ಸರ್ವೀಸ್ ರೋಡ್ ಹೆಸರಿನಲ್ಲಿ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿರುವ ರಸ್ತೆ ನಿರ್ಮಾಣ ಸಂಸ್ಥೆಯ ಗುತ್ತಿಗೆದಾರ ಅಶೋಕ ಖೇಣಿ ವಿರುದ್ದ ರಾಜ್ಯ ಹಾಗೂ ಕೇಂದ್ರ ಸರಕಾರ ಈಗಲಾದರೂ ಛಾಟೀ ಬೀಸಬೇಕು.

ಜಿಲ್ಲೆಯ ಜನಪ್ರತಿನಿಧಿಗಳು ಅವರಿಗೆ ಬಿಸಿ ತಾಕಿಸುವ ಬದಲಿಗೆ ಗುತ್ತಿಗೆದಾರರ ತಾಣಕ್ಕೆ ತಕ್ಕಂತೆ ಕುಣಿಯುವ ಬದಲಿಗೆ ಇವರು ಪಟ್ಟು ಹಿಡಿದು ಮೊದಲು ಕೆಲಸ ಮಾಡಿಸಬೇಕು ಎಂದು ಸಲಹೆ ನೀಡಿದರು.ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ನಂದಿ ಇನ್ಪಾಸ್ಟಕ್ಷರ್ ಕಂಪನಿ ಮಾಲೀಕ ಅಶೋಕ ಖೇಣಿ ಅವರು ಹೆದ್ದಾರಿ ನಿರ್ವಹಣೆ, ರಸ್ತೆಯ ಅಗಲೀಕರಣ, ಹುಬ್ಬಳ್ಳಿ-ಧಾರವಾಡ ಅವಳಿನಗರ ಸುತ್ತಮುತ್ತಲಿನ 26 ಕಿಲೊ ಮೀಟರ್ ಬೈಪಾಸ್ ನಿರ್ವಹಣೆ ಹೆಸರಿನಲ್ಲಿ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ.

ಹೀಗಾಗಿ ಮೊದಲಿಗೆ ಯಾವುದೇ ಕಾರಣಕ್ಕೂ ಅವರಿಗೆ ಟೋಲ್ ಸಂಗ್ರಹ ಮಾಡಲು ಬಿಡಬಾರದು. ತಕ್ಷಣ ಅವರನ್ನು ಬಂಧಿಸಿ, ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು.ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಮಾತನಾಡಿ, ನಂದಿ ಇನ್ಪಾಸ್ಟಕ್ಷರ್ ಮಾಲೀಕ ಅಶೋಕ ಖೇಣಿ ಹುಬ್ಬಳ್ಳಿ-ಧಾರವಾಡ ಅವಳಿನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಶುಲ್ಕ ಸಂಗ್ರಹಿಸುತ್ತಿದ್ದಾರೆ. ಅವರು ತಮ್ಮ ಟೋಲ್ ವಸೂಲಿಗೆ ಹೆಚ್ಚಿನ ಕೋಠಡಿ ಹಾಗೂ ಸಿಬ್ಬಂದಿ ನಿಯೋಜಿಸುವಲ್ಲಿ ತೋರಿಸಿರುವ ಕಾಳಜಿ ಈ ಹೆದ್ದಾರಿ ಸಮೀಪ ನಿಯಮಾನುಸಾರ ನಿರ್ವಹಿಸಬೇಕಾದ ತುರ್ತು ಸೇವೆಗೆ ಅಂಬುಲೆನ್ಸ್, ಕ್ರೇನ್ ವ್ಯವಸ್ಥೆ ಹಾಗೂ ಅಗತ್ಯ ಸಿಬ್ಬಂದಿ ನೇಮಕ ಜೊತೆಗೆ ಹೆದ್ದಾರಿ ಅಕ್ಕಪಕ್ಕದಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ತೋರಿಸದಿರುವುದು ನೋವಿನ ಸಂಗತಿಯಾಗಿದೆ ಎಂದರು.

ಜೊತೆಗೆ ಹೆದ್ದಾರಿ ಅಕ್ಕಪಕ್ಕದ ಹಳ್ಳಿಗಳಿಗೆ ತೆರಳು ಸರ್ವೀಸ್ ರಸ್ತೆ, ಅಕ್ಕಪಕ್ಕದ ಹೊಲ, ಮನೆಗಳಿಗೆ ಹೋಗುವ ರೈತರ ಅಗತ್ಯಕ್ಕೆ ತಕ್ಕಂತೆ ರಸ್ತೆ ನಿರ್ಮಾಣ ಮಾಡಬೇಕು. ಅವಳಿನಗರ ವ್ಯಾಪ್ತಿಯಲ್ಲಿಯೇ ಕಳೆದ ಎರಡು ದಶಕಗಳಲ್ಲಿ 10 ಸಾವಿರ ಜಾನುವಾರು, 1200 ಜನ ಪ್ರಾಣ ಕಳೆದು ಕೊಂಡಿದ್ದಾರೆ. ಹೀಗಾಗಿ ಈ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಬಡ ಕುಟುಂಬಕ್ಕೆ ಹಾಗೂ ವಿಶೇಷವಾಗಿ ರೈತರ ಜಾನುವಾರುಗಳಿಗೆ ಗುತ್ತಿಗೆದಾರರಿಂದ ಪರಿಹಾರ ಧನ ವಸೂಲಿ ಮಾಡಿ ಕೊಡಿಸಬೇಕು.

ಈ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.ಇದೇ ಕಂಪನಿ ಮಾಲೀಕತ್ವದ ಬೆಂಗಳೂರು ಮೈಸೂರು ಕಾರಿಡಾರ್ ರಾಜ್ಯ ಹಾಗೂ ಕೇಂದ್ರ ಸರಕಾರ ತಮ್ಮ ಪ್ರಭಾವ ಬಳಿಸಿ ಸುಪರ್ದಿಗೆ ತೆಗೆದುಕೊಂಡು ಬೆಂಗಳೂರು ಮೈಸೂರು ಕಾರಿಡಾರ್ ಮಾಡಿದ ಹಾಗೆ ಹುಬ್ಬಳ್ಳಿ-ಧಾರವಾಡ ಕಾರಿಡಾರ್ ಮಾಡಬೇಕು. ಅದಕ್ಕೆ ಅಲ್ಲಿಯ ಜನಪ್ರತಿನಿಧಿಗಳು ತೋರಿಸಿದ ಪ್ರಭಾವ, ಇಚ್ಛಾಶಕ್ತಿ ಹಾಗೂ ಕಾಳಜಿ ಜಿಲ್ಲೆಯವರೇ ಆದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಭೀಮಪ್ಪ ಕಸಾಯಿ, ಹಿರಿಯ ಕ್ರೀಡಾ ತರಬೇತುದಾರ ಕೆ.ಎಸ್. ಭೀಮಣ್ಣವರ, ಸಿದ್ದು ಕಂಬಾರ, ಉಳವಪ್ಪ ಒಡೆಯರ್, ಪ್ರಕಾಶ ಕಾಡ್ಲಿಗೇರಿ, ಕಾಂಗ್ರೆಸ್ ಮುಖಂಡ ಶಾಕೀರ ಸನದಿ, ಜಗದೀಶ ಅಣ್ಣಿಗೇರಿ, ಶ್ರೀಶೈಲ ಕಮತರ, ಕೆಲಗೇರಿ ಮುಖಂಡರಾದ ರುದ್ರಗೌಡ ಪಾಟೀಲ, ಕಲಾವಿದ ಮಂಜುನಾಥ ಹಿರೇಮಠ,ಬಸಯ್ಯ ಹಿರೇಮಠ. ಲಾರಿ ಮಾಲೀಕರ ಸಂಘದ ಗೈಬುಸಾಬ ಹೊನ್ನಾಳ, ವಾಸು ಕೋನರಡ್ಡಿ,ರವೀಂದ್ರ ಬೆಳಮಕರ್, ಎಂ.ಆರ್. ಪಾಟೀಲ, ಮೈನುದ್ದಿನ ಮುಲ್ಲಾ ಸೇರಿದಂತೆ ಅನೇಕರು ಹೋರಾಟಕ್ಕೆ ಶಕ್ತಿ ತುಂಬಿದರು.


Google News

 

 

WhatsApp Group Join Now
Telegram Group Join Now
Suddi Sante Desk