ಗರಗ –
ಉತ್ತರ ಕರ್ನಾಟಕದ ಶ್ರೇಷ್ಠ ಮಠಗಳಲ್ಲಿ ಒಂದಾದ ಧಾರವಾಡದ ಗರಗ ಮಡಿವಾಳೇಶ್ವರ ಕಲ್ಮಠ ಮಠದ ಜೀರ್ಣೋದ್ದಾರಕ್ಕೆ ರಾಜ್ಯ ಸರ್ಕಾರ 20 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಭಕ್ತಾದಿಗಳನ್ನು ಹೊಂದಿದ ಐತಿಹಾಸಿಕ ಗರಗದ ಶ್ರೀ ಮಡಿವಾಳೇಶ್ವರ ಕಲ್ಮಠದ ಜೀರ್ಣೋದ್ಧಾರಕ್ಕೆ ಅನುದಾನ ನೀಡವಂತೆ ಶಾಸಕರಾದ ಅಮೃತ ದೇಸಾಯಿ ರಾಜ್ಯ ಸರ್ಕಾರಕ್ಕೆ ಅದರಲ್ಲೂ ಧಾರ್ಮಿಕ ಮತ್ತು ದತ್ತ ಇಲಾಖೆಗೆ ಒತ್ತಾಯವನ್ನು ಮಾಡಿ ಪತ್ರವೊಂದನ್ನು ಬರೆದಿದ್ದರು.

ಇವರ ಮನವಿಗೆ ಸ್ಪಂದಿಸಿರುವ ರಾಜ್ಯ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವರು ಕೂಡಲೇ ಮಠದ ಜೀರ್ಣೋದ್ದಾರಕ್ಕೆ 20ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ.

ಅನುದಾನದ ಮೊದಲ ಹಂತವಾಗಿ 5 ಲಕ್ಷ ಮೌಲ್ಯದ ಚೆಕ್ಕನ್ನು ಗರಗ ಮಠದಲ್ಲಿ ಕಲ್ಮಠದ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮಿಗಳಿಗೆ ಶಾಸಕರು ನೀಡಿದರು. ಮಠಕ್ಕೆ ತೆರಳಿದ ಶಾಸಕರು ಕೊಟ್ಟ ಮಾತಿನಂತೆ ಹೇಳಿದಂತೆ ಮಠದ ಸ್ವಾಮಿಜಿಗಳಿಗೆ ಬಿಡುಗಡೆಯಾದ ಮೊದಲ ಹಂತದ ಚೇಕ್ ನ್ನು ನೀಡಿದರು.ಇದೇ ವೇಳೆ ದೇವರ ದರ್ಶನ ಮಾಡಿಕೊಂಡು ಆಶಿರ್ವಾದ ಪಡೆದುಕೊಂಡರು.

ಇನ್ನೂ ಈ ಒಂದು ಸಂದರ್ಭದಲ್ಲಿ ತಾಲೂಕು ತಹಶೀಲ್ದಾರರಾದ ಸಂತೋಷ ಬಿರಾದಾರ, ರೈತ ಮುಖಂಡರು ಹಾಗೂ ಮಡಿವಾಳೇಶ್ವರ ಮಠದ ಟ್ರಸ್ಟ ಕಾರ್ಯಾಧ್ಯಕ್ಷರಾದ ಅಶೋಕ ದೇಸಾಯಿ, ಮಡಿವಾಳಪ್ಪ ಮಾಳಾಪುರ ಸೇರಿದಂತೆ ಗರಗ ಮತ್ತು ಹಂಗರಕಿ ಗ್ರಾಮದ ಹಲವಾರು ಗಣ್ಯರು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.