ಧಾರವಾಡ –
ಧಾರವಾಡ ಜಿಲ್ಲೆಯ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಗಿ ಸುಧೀರ ಮುಧೋಳ ಅಧಿಕಾರ ವಹಿಸಿಕೊಂಡ ಮೇಲೆ ಧಾರವಾಡದಲ್ಲಿಂದು ವಿಶೇಷವಾದ ಕಾರ್ಯಕ್ರಮವೊಂದು ನಡೆಯಿತು.
ನಗರದ ಸಫಾ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಂಘಟನೆಯ ಮಾಜಿ ರಾಜ್ಯಾದ್ಯಕ್ಷ ಬಸವರಾಜ ಮುತ್ತಗಿ ಉದ್ಘಾಟಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಪೌರ ಕಾರ್ಯಕರ್ಮಿಕರಿಗೆ ಸನ್ಮಾನ ವನ್ನು ಮಾಡಲಾಯಿತು. ಐದು ಜನ ಪೌರ ಕಾರ್ಮಿಕರಿಗೆ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಸಂಘಟನೆಯ ಬೆಂಬಲದಿಂದಾಗಿ ಆಯ್ಕೆಯಾದ ಗ್ರಾಮಪಂಚಾಯತಿ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೇ ಸಂಘಟನೆಯ ವತಿಯಿಂದಾಗಿ ಲಾಕ್ ಡೌನ್ ಸಮಯದಲ್ಲಿ ಕರ್ತವ್ಯ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಮುತ್ತಗಿ, ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಮುಧೋಳ,ಜಿಲಾನಿ ಖಾಜಿ, ಮಂಜುನಾಥ ಸುತಗಟ್ಟಿ, ಕರಿಯಪ್ಪ ಮಾಳಗಿ, ಲಕ್ಷ್ಮಣ ದೊಡಮನಿ, ಶಿಡ್ಲಪ್ಪ ಮಾಳಗಿಮನಿ,ಕಲ್ಲಪ್ಪ ಶೀಗಿಹಳ್ಳಿ.ಎಲ್ ಐ ದೊಡಮನಿ,ಮುತ್ತು ಕುಲಕರ್ಣಿ, ಮಾರುತಿ ಬಾರಕೇರ, ಪರಶುರಾಮ ದೊಡಮನಿ, ಸೇರಿದಂತೆಹಲವು ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು. ಇದೇ ವೇಳೆ ಎಲ್ಲರಿಗೂ ಪ್ರೀತಿಯ ಔತನಕೂಟವನ್ನು ಏರ್ಪಡಿಸಲಾಗಿತ್ತು.