ಎತ್ತು ಎಮ್ಮೆ,ಗಳೊಂದಿಗೆ ಧಾರವಾಡ ದಲ್ಲಿ ಪ್ರತಿಭಟನೆ ಪ್ರತಿಭಟನೆಗೆಯಲ್ಲಿ ವಿಶೇಷವಾಗಿ ಕಂಡು ಬಂದವು ಜಾನುವಾರಗಳು

Suddi Sante Desk

ಧಾರವಾಡ –

ಕೇಂದ್ರ ಸರ್ಕಾರದ ಕೃಷಿ ನೀತಿಯನ್ನು ಖಂಡಿಸಿ ಕರೆ ನೀಡಿರುವ ಭಾರತ್ ಬಂದ್ ಗೆ ಧಾರವಾಡದಲ್ಲಿ ಬೆಂಬಲ ಕಂಡು ಬಂದಿದ್ದು.ಇನ್ನೂ ಈ ಒಂದು ಬಂದ್ ನ್ನು ಬೆಂಬಲಿಸಿ ನಗರದಲ್ಲಿ ಹಲವಾರು ಸಂಘಟನೆಗಳು ಪ್ರತಿಭಟನೆಯನ್ನು ಮಾಡುತ್ತಿದ್ದು ಇದರೊಂದಿಗೆ ಎತ್ತು ಚಕ್ಕಡಿಗಳೊಂದಿಗೆ ಪ್ರತಿಭಟನೆ ಯನ್ನು ಮಾಡಲಾಯಿತು.

ಹೌದು ನಗರದ ಜುಬಲಿ ವೃತ್ತದಲ್ಲಿ ಎತ್ತು ಚಕ್ಕಡಿ ಗಳೊಂದಿಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮುಖಂಡರು ಪ್ರತಿಭಟನೆ ಮಾಡಿ ದರು.

ಇನ್ನೂ ಮತ್ತೊಂದೆಡೆ ಇದೇ ಸಂಘಟನೆಯ ಕಾರ್ಯ ಕರ್ತರು ಮುಖಂಡರು ಎಮ್ಮೆಗಳನ್ನು ತಗೆದು ಕೊಂಡು ಬಂದು ಪ್ರತಿಭಟನೆ ಮಾಡಿದರು

ಇದರೊಂದಿಗೆ ಗಮನವನ್ನು ಸೆಳೆದರು. ಸಾಮಾನ್ಯ ವಾಗಿ ಹಾಗೇ ಹೀಗೆ ಪ್ರತಿಭಟನೆ ಮಾಡೊದು ಸರ್ವೆ ಸಾಮಾನ್ಯ ಆದರೆ ಇವರು ಎತ್ತು ಮತ್ತು ಚಕ್ಕಡಿ ಗಳೊಂದಿಗೆ ಬಂದು ವಿಶೇಷವಾಗಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿ ಭಾರತ್ ಬಂದ್ ಗೆ ವಿಭಿನ್ನವಾಗಿ ಬೆಂಬಲವನ್ನು ನೀಡಿದ್ದು ಕಂಡು ಬಂದಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.