ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.ಗೂಳಿಯ ಹುಚ್ಚಾಟಕ್ಕೆ ಯುವಕನಿಗೆ ಗಂಭೀರ ಗಾಯವಾಗಿರುವ ಘಟನೆ ಹುಬ್ಬಳ್ಳಿಯ ಜವಳಿಸಾಲಿನಲ್ಲಿ ನಡೆದಿದೆ.
ಕಳೆದ ರಾತ್ರಿ ನಗರದ ಜವಳಿ ಸಾಲಿನಲ್ಲಿ ಕಂಡ ಕಂಡವರ ಮೇಲೆ ಎರಗಿದ ಗೂಳಿ ದಾಳಿಯಿಂದ ನಗರದ ಜನತೆ. ಆತಂಕಕ್ಕೊಳಗಿದ್ದು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳ ಮೇಲೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ವಾರದೊಳಗೆ ಬಿಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಬಿಡಿ.ಇಲ್ಲದಿದ್ದರೆ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಎಚ್ಚರಿಕೆ ನೀಡಿದರು.
ಮಹಾನಗರ ಪಾಲಿಕೆ ಬಿಡಾಡಿ ದನಗಳು ಮತ್ತು ನಾಯಿ ಹಾವಳಿ ತಡೆಯಲು ಯಾಕಾಗುತ್ತಿಲ್ಲಾ..?ಅಧಿಕಾರಿಗಳು ಕಣ್ಣು ಇದ್ದು ಕುರುಡರಂತೆ ವರ್ತಿಸುವುದರಿಂದ ಜನರ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಿದೆ.