ಹುಬ್ಬಳ್ಳಿಯ ರೋಟರಿ ಶಾಲೆಯ ವಿದ್ಯಾರ್ಥಿಗೆ ಕರೋನಾ ಪಾಸಿಟಿವ್ ಸೋಮವಾರದ ವರೆಗೆ ಶಾಲೆಗೆ ರಜೆ ಘೋಷಣೆ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ರೋಟರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ದೃಢವಾಗಿದೆ.ನಗರದ ಆದರ್ಶ ನಗರದ ರೋಟರಿ ಶಾಲೆಯ ವಿದ್ಯಾರ್ಥಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಹೀಗಾಗಿ ಶಾಲೆಗೆ ಸೋಮವಾರದ ವರೆಗೂ ರಜೆ ಘೋಷಣೆ ಮಾಡಲಾಗಿದೆ.

ಸಧ್ಯ ಶಾಲೆಯಲ್ಲಿ ಸುಮಾರು 2000 ವಿದ್ಯಾರ್ಥಿಗಳು ಓದುತ್ತಿದ್ದು ದೊಡ್ಡ ಮಟ್ಟದಲ್ಲಿ ಆತಂಕವೊಂದು ಶುರು ವಾಗಿದೆ. ಮೊನ್ನೆಯಷ್ಟೆ ಶಾಲೆಗೆ ಬಂದಿದ್ದ ಈ ಒಂದು ವಿದ್ಯಾರ್ಥಿ.

ಇಂದು ಆತನ ಕೋವಿಡ್ ವರದಿ ಪಾಜಿಟಿವ್ ಹಿನ್ನೆಲೆಯಲ್ಲಿ ಕೂಡಲೇ ಶಾಲೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನೂ ಶಾಲೆಗೆ ಬಂದ ಮಕ್ಕಳನ್ನು ವಾಪಸ್ ಕಳಿಸಿದ್ದಾರೆ ಶಾಲಾ ಆಡಳಿತ ಮಂಡಳಿ.ಶಾಲಾ ಸಿಬ್ಬಂದಿಗೆ ಶುರುವಾಗಿದೆ

ಸ್ವಾಬ್ ಟೆಸ್ಟ್ ಮಾಡಲಾಗುತ್ತಿದೆ.ಇನ್ನೂ ಇತ್ತ ಪೋಷಕ ರಲ್ಲೂ ಕೂಡಾ ಆರಂಭವಾಗಿದೆ ದೊಡ್ಡ ಆತಂಕ. ನಾಳೆಯಿಂ ದ ಪಾಲಕರು ಮತ್ತು ವಿದ್ಯಾರ್ಥಿಗಳಿಕೆ ಕರೋನಾ ಟೆಸ್ಟ್ ನ್ನು ಮಾಡಲಾಗುತ್ತಿದೆ.ಸಧ್ಯ ಶಾಲೆಯನ್ನು ಪೂರ್ತಿ ಸ್ಯಾನಿಟೈಜ್ ಮಾಡಿದ್ದಾರೆ ಶಾಲಾ ಸಿಬ್ಬಂದಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.