ಧಾರವಾಡದ BJP ಹಿರಿಯ ಕಾರ್ಯಕರ್ತ ಚಂದ್ರಶೇಖರಯ್ಯಾ ಬಳಗಾನೂರಮಠ ನಿಧನ – ನಿಧನಕ್ಕೆ ಪಕ್ಷದ ನಾಯಕರು ಕಾರ್ಯಕರ್ತರು ಮುಖಂಡರು ಸಂತಾಪ ನಮನ…..

Suddi Sante Desk

ಧಾರವಾಡ –

ಧಾರವಾಡದ BJP ಪಕ್ಷದ ಹಿರಿಯ ಕಾರ್ಯಕರ್ತ ಪಕ್ಷದ ನಿಷ್ಠಾವಂತ ಮುಖಂಡ ಚಂದ್ರಶೇಖರಯ್ಯಾ ಬಳಗಾನೂರ ಮಠ ನಿಧನರಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಅನಾರೋ ಗ್ಯದಿಂದ ಬಳಲುತ್ತಿದ್ದ ಇವರು ನಿನ್ನೆ ಮನೆಯಲ್ಲಿ ಹೃದಯಾ ಘಾತದಿಂದ ನಿಧನರಾದರು ಹಿರಿಯ ಮತ್ತು ಸರಳ ವ್ಯಕ್ತಿತ್ವ ದ ಪಕ್ಷದ ಕಾರ್ಯಕರ್ತರಾಗಿದ್ದು ನಿಧನಕ್ಕೆ ಧಾರವಾಡ ಜಿಲ್ಲೆಯ ನಾಯಕರು ಕಾರ್ಯಕರ್ತರು ಮುಖಂಡರು ಸಂತಾಪವನ್ನು ಸೂಚಿಸಿ ನಮನವನ್ನುವ ಸಲ್ಲಿಸಿದ್ದಾರೆ‌.

ಇನ್ನೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸೇರಿದಂತೆ ಧಾರವಾಡ ಬಿಜೆಪಿ ಪಕ್ಷದ ಮುಖಂಡರು ನಾಯಕರು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಧಾರವಾಡ ದಲ್ಲಿ ನಡೆಯಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.