ಶಾಲೆಯಲ್ಲಿ ಮೊಟ್ಟೆ ವಿತರಣೆ ಕುರಿತು ಸಚಿವರಿಂದ ಮುಖ್ಯ ಮಾಹಿತಿ – ಮೊಟ್ಟೆ ವಿತರಣೆಯನ್ನು ನಿಲ್ಲಿಸೊದಿಲ್ಲವೆಂದರು ಸಚಿವರು

Suddi Sante Desk

ಬೆಳಗಾವಿ –

ರಾಜ್ಯದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸುವ ಉದ್ದೇಶ ದಿಂದ ಶಾಲೆಯಲ್ಲಿ ಸಧ್ಯ ಮಕ್ಕಳಿಗೆ ಮೊಟ್ಟೆ,ಬಾಳೆಹಣ್ಣು ನ್ನು ನೀಡಲಾಗುತ್ತಿದ್ದು ಇದರೊಂದಿಗೆ ಶೀಘ್ರದಲ್ಲೇ ಶೇಂಗಾ ಚೆಕ್ಕಿ ಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.ಬೆಳಗಾವಿ ಯಲ್ಲಿ ಮಾತನಾ ಡಿದ ಅವರು ವಿತರಣೆಗೆ ವಿರೋಧ ವ್ಯಕ್ತವಾಗಿದ್ದು ಮೊಟ್ಟೆ ವಿತರಣೆ ನಿಲ್ಲಿಸಬಾರದು ಎಂಬ ಒತ್ತಾಯವೂ ಇದೆ.ಈ ಬಗ್ಗೆ ಈಗಾಗಲೇ ನಾವು ತೀರ್ಮಾನವನ್ನು ತಗೆದುಕೊಂಡಿ ದ್ದು ನಿಲ್ಲಿಸೊದಿಲ್ಲವೆಂದರು.

ಇನ್ನೂ ಪೋಷಕಾಂಶ ಒಳಗೊಂಡಿರುವ ಕಾರಣಕ್ಕೆ ಮಕ್ಕ ಳಿಗೆ ಮೊಟ್ಟೆ ನೀಡಲಾಗುತ್ತಿದೆ.ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು ಕೊಡಲಾಗುವುದು ಎಂದರು

ಇನ್ನೂ ಮೊಟ್ಟೆ ವಿತರಣೆಯನ್ನು ನಿಲ್ಲಿಸುವುದಿಲ್ಲ ತಜ್ಞರು ನೀಡಿದ ಶಿಫಾರಸ್ಸಿನ ಅನ್ವಯ ಮಕ್ಕಳಿಗೆ ಮೊಟ್ಟೆ ವಿತರಿಸ ಲಾಗುತ್ತಿದೆ.ತಜ್ಞರು ನೀಡಿರುವ ಸಲಹೆಯಂತೆ ಎರಡು ಗಂಟೆಕಾಲ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವಧಿ ಹೆಚ್ಚಳ ಮಾಡುವ ಬಗ್ಗೆ ತಜ್ಞರ ಮಾಹಿತಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.