ಧಾರವಾಡ –
ರಂಗು ರಂಗಿನ ಹೋಳಿ ಹಬ್ಬವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕೂಡಾ ಆಚರಣೆ ಮಾಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಹೇಳಿದ ಶಾಸಕರು ಕುಟುಂಬದ ಸದಸ್ಯರೊಂದಿಗೆ ಮಾತ್ರ ಹಬ್ಬವನ್ನು ಆಚರಣೆ ಮಾಡಿದರು.

ಪತ್ನಿ ಶ್ರೀಮತಿ ಪ್ರಿಯಾ ದೇಸಾಯಿ ಮಕ್ಕಳು ಹಾಗೂ ಮನೆಯ ಕುಟುಂಬದ ಸದಸ್ಯರೊಂದಿಗೆ ತಮ್ಮ ತೋಟದಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡಿದರು

ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ತೋಟಕ್ಕೆ ತೆರಳಿದ ಶಾಸಕರು ಕುಟುಂಬದ ಸದಸ್ಯರು ಮತ್ತು ಆಪ್ತ ರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದರು

ಶಾಸಕರ ಕುಟುಂಬದೊಂದಿಗೆ ಇಂಜಿನಿಯರ್ ಸಂತೋಷ ಹಿರೇಮಠ ,ನಾರಾಯಣ ಜಾಧವ್, ರೋಹಿತ್ ಐನಾಪೂರ, ಕುಟುಂಬದ ವರು ಕೂಡಾ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ರಂಗು ತುಂಬಿದರು

ಇವರೊಂದಿಗೆ ಮನೆಯ ಕುಟುಂಬದ ಸದಸ್ಯರಾದ ಪ್ರಕಾಶ್ ಕಟ್ಟಿ, ಮಂಜು ಜಾಧವ್, ಮಂಜು ಹೊಂಗಲ್,ಮಂಜುನಾಥ ಹಿರೇಮಠ, ಖಾಸೀಂ, ಜಗದೀಶ್, ಅಕ್ಷಯ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.