ಸಿಎಂ, ಮಾಜಿ ಸಿಎಂ ನಡುವೆ ಮುಂದುವರಿದ ಶಿಥಲ ಸಮರ ಸಭೆಯಲ್ಲಿಯೇ ಹಿಂಗಾದರೇ ಹೆಂಗೆ…..!

Suddi Sante Desk

ಹುಬ್ಬಳ್ಳಿ –

ಬಿಜೆಪಿ ಪಕ್ಷದಲ್ಲಿನ ನಾಯಕರ ಒಳ ಬೇಗುದಿ ಎಷ್ಟೋ ಶಮನ ಮಾಡಿದರು ಮಾತ್ರ ತಣ್ಣಗಾಗುತ್ತಿಲ್ಲ.ಎಲ್ಲವೂ ಸರಿ ಇದೆ ಎಂಬುವುದು ತೋರಿಕೆಗೆ ಮಾತ್ರವಾಗಿದ್ದು ಏನು ಸರಿ ಇಲ್ಲಾ ಎಂಬುದು ಮೇಲ್ನೋಟಕ್ಕೆ ಈ ಒಂದು ಘಟನೆ ಯಿಂದಾಗಿ ಮತ್ತೊಮ್ಮೆ ಸತ್ಯವಾಗಿದೆ.

ಹೌದು..ಹುಬ್ಬಳ್ಳಿ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆ ಯಲ್ಲಿ ಸಿಎಂ ಹಾಗೂ ಮಾಜಿ ಸಿಎಂ ವೈಮನಸ್ಸು ಮುಂದು ವರಿದಿದೆ. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಶೆಟ್ಟರ್ ನಡುವೆ ಶಿಥಲ್ ಸಮರ ಮುಂದುವರೆದಿದೆ ಎಂಬೊಂದನ್ನು ಈ ಒಂದು ಚಿತ್ರಣದಿಂದಲೇ ತಿಳಿದು ಕೊಳ್ಳಬಹುದು

ಕಾರ್ಯಕ್ರಮದಲ್ಲಿ ಸಿಎಂ ಆಗಮಿಸುತ್ತಿದ್ದಂತೆ ಸಿಎಂ ಕಡೆಗೆ ಎಲ್ಲ ಸಚಿವರು ನೋಡಿದರೂ ಕೂಡ ಜಗದೀಶ್ ಶೆಟ್ಟರ್ ತಿರುಗಿ ನೋಡದೆ ಮೌನ ತಾಳಿದರು.ಎಲ್ಲಾ ಸಚಿವರು ಸಿಎಂಗೆ ನಮಸ್ಕಾರ ಮಾಡಿದ ಸಂದರ್ಭದಲ್ಲಿ ಮಾಜಿ ಸಿಎಂ ಶೆಟ್ಟರ್ ಮೌನ ವಹಿಸಿದ್ದು ಮಾತ್ರವಲ್ಲದೆ ಆ ಕಡೆಗೆ ತಿರುಗಿ ಕೂಡ ನೋಡದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸ ವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.