ಜೈಪುರ –
ಅತ್ಯಾಚಾರಕ್ಕೊಳಗಾದ ಯುವತಿ ತನ್ನ ಮೇಲೆ ಆಗಿರುವ ಅನ್ಯಾಯದ ವಿರುದ್ಧ ದೂರು ದಾಖಲು ಮಾಡಲು ಬಂದರೆ ನ್ಯಾಯ ಒದಗಿಸಬೇಕಾದ ಆ ಪೊಲೀಸ್ ಅಧಿಕಾರಿ ಅವಳನ್ನೇ ಮಲಗಲು ಕರೆದಿ ದ್ದಾರೆ. ಹೌದು ಪೊಲೀಸ್ ಅಧಿಕಾರಿ ದೂರು ದಾಖ ಲು ಮಾಡಬೇಕಿದ್ದರೆ ನನ್ನ ಜತೆ ಮಲಗು ಎಂದು ಹೇಳಿರುವ ಭಯಾನಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಈ ಕಾಮುಕ ಎಸಿಪಿಯ ಹೆಸರು ಕೈಲಾಶ್ ಬೊಹರಾ. ಮಹಿಳಾ ದೌರ್ಜನ್ಯ ವಿರುದ್ದದ ವಿಶೇಷ ತಂಡದ ಎಸಿಪಿಯಾಗಿದ್ದ ಬೋಹರಾ ಇಂಥದ್ದೊಂದು ನೀಚ ಕೃತ್ಯ ಎಸಗಿದ್ದು ಈತನ ವಿರುದ್ಧ ಸಂತ್ರಸ್ತೆ ಉನ್ನತ ಅಧಿಕಾರಿಗಳಲ್ಲಿ ದೂರು ದಾಖಲು ಮಾಡಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಬೊಹರಾನನ್ನು ವಜಾ ಮಾಡಿ ಆದೇಶಿಸಿದೆ. ಈ ವಜಾ ಆದೇಶಕ್ಕೆ ರಾಜ್ಯಪಾಲರು ಕೂಡ ಅನುಮೋದನೆ ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಳ್ಳಲು ನನ್ನ ಜತೆ ಲೈಂಗಿಕ ಸಂಪರ್ಕ ಮಾಡು ಎಂದು ಬೊಹರಾ ಹೇಳಿರುವುದಾಗಿ ಯುವತಿ ದೂರಿದ್ದಾಳೆ. ಮೊದಲು ದೂರು ದಾಖಲು ಮಾಡಿಕೊಳ್ಳಲು ನನ್ನ ಬಳಿ ಹಣ ಕೇಳಿದ. ಆದರೆ ನನ್ನ ಬಳಿ ಹಣ ಇರಲಿಲ್ಲ ಆಗ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.ಯುವತಿಯ ದೂರನ್ನು ಆಧರಿಸಿ ಎಸಿಬಿ ಪೊಲೀಸರು ಬೊಹರಾ ನನ್ನು ಬಂಧಿಸಿದ್ದರು. ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ಬಿಜೆಪಿ ವಿಧಾನಮಂಡಲ ಅವೇಶನದಲ್ಲಿ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಈತ ಕಾಮುಕ ಎಸಿಪಿ ಕೆಲಸ ಕಳೆದುಕೊಂಡಿದ್ದಾನೆ.ಕಳೆದ ತಿಂಗಳು ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಇದರ ಬಗ್ಗೆ ದೂರು ದಾಖಲು ಮಾಡಲು ಹೋಗಿದ್ದೆ ಎಂದಿ ದ್ದಾರೆ ನೊಂದ ಯುವತಿ