ಧಾರವಾಡ: –
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಿಗದಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಘಾಟಿನ ಹಾಗೂ ಅವರ ಸಹೋದರರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣ ಕುರಿತಂತೆ ಧಾರವಾಡ ಗ್ರಾಮೀಣ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ.
ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಘಾಟಿನ ಸಹೋದರರಾದ ಅರ್ಜುನ ಘಾಟಿನ,ನಾಗರಾಜ ಘಾಟಿನ ಇವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಪ್ರಮುಖ ಆರೋಪಿ ಸ್ಥಾನದಲ್ಲಿರುವ ನಿಂಗಪ್ಪ ಘಾಟಿನ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಜಮೀನಿನ ವ್ಯಾಜ್ಯ ಕುರಿತಂತೆ ಸಹೋದರರೊಂದಿಗೆ ಸೇರಿಕೊಂಡು ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಘಾಟಿನ ಅಣ್ಣಪ್ಪ ಕಾಶಿ ಎಂಬುವರ ಮೇಲೆ ಮೇಲೆ ಹಲ್ಲೆ ನಡೆಸಿದ್ದು ಈ ಕುರಿತಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರಿನ ಹಿನ್ನಲೆಯಲ್ಲಿ ಧಾರವಾಡ ಗ್ರಾಮೀಣ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ ,PSI ಮಹೇಂದ್ರ ನಾಯಕ ಮತ್ತು ಟೀಮ್ ಇಬ್ಬರನ್ನು ಬಂಧಿಸಿ ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಘಾಟಿನ ಬಂಧನಕ್ಕೆ ಜಾಲ ಬೀಸಿದ್ದಾರೆ.
ಮುರಕಟ್ಟಿ ಹದ್ದಿಗೆ ಹೊಂದಿಕೊಂಡು 6 ಎಕರೆ ಜಮೀನು ಇದ್ದು, ಆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಿದ್ದರೂ ನಿಂಗಪ್ಪ ಘಾಟಿನ ಹಾಗೂ ಅವರ ಸಹೋದರರು ಆ ಭೂಮಿಯನ್ನು ಇಂದು ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪ್ಪಣ್ಣ ಕಾಶಿ ಸೇರಿದಂತೆ ಇನ್ನಿತರ ನಾಲ್ಕೈದು ಜನ ಅಲ್ಲಿಗೆ ಹೋಗಿ ಈ ಜಮೀನಿನ ವ್ಯಾಜ್ಯ ಇನ್ನೂ ನ್ಯಾಯಾಲಯದಲ್ಲಿದೆ.ಹೀಗೇ ಏಕೆ ಉಳುಮೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು.
ಇಷ್ಟಕ್ಕೆ ಮಾತಿಗೆ ಮಾತು ಬೆಳೆದು ನಿಂಗಪ್ಪ ಘಾಟಿನ, ನಾಗರಾಜ ಘಾಟಿನ ಹಾಗೂ ಅರ್ಜುನ್ ಘಾಟಿನ್ ಎಂಬುವವರು ಕೊಡಲಿ ಸೇರಿದಂತೆ ಮಾರಕಾಸ್ತ್ರಗ ಳಿಂದ ಅಪ್ಪಣ್ಣ ಕಾಶಿ ಮೇಲೆ ಹಲ್ಲೆ ನಡೆಸಿದ್ದರು. ಈ ಜಗಳದ ದೃಶ್ಯವನ್ನು ಅಲ್ಲಿಯವರೇ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿತ್ತು ಸಧ್ಯ ಕಾರ್ಯಾಚರಣೆ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿ ನಿಂಗಪ್ಪ ಘಾಟಿನ ಬಂಧನಕ್ಕೆ ಜಾಲ ಬೀಸಿದ್ದಾರೆ.