ಬೆಳಗಾವಿ –
ಬೆಳಗಾವಿಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದ ಬಳಿಯ ಹಾಲ್ ನಲ್ಲಿ ಸಭೆಯನ್ನು ಕರೆಯಲಾಗಿತ್ತು.ರೈತರು, ಸಾರಿಗೆ ನೌಕರರ ಜೊತೆಗೆ ಸಭೆ ನಡೆಸಲು ತೆರಳುತ್ತಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೆರಳಿದರು
ಚೆನ್ನಮ್ಮ ವೃತ್ತದ ಬಳಿಯ ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ವಶಕ್ಕೆ ಪಡೆದುಕೊಂಡ ಪೊಲೀಸರು ಕರೆದುಕೊಂಡು ಹೋದರು ಬೆಳಗಾವಿ ಕ್ಯಾಂಪ್ ಪೊಲೀಸರಿಂದ ವಶಕ್ಕೆ ತೆಗೆದುಕೊಂಡು ಹೋಗಿದ್ದು ಇನ್ನೂ ಇತ್ತ ಪ್ರತಿಭಟನೆ ನಿರತ ಸಾರಿಗೆ ನೌಕರರು ಬಂಧನದಿಂದ ಅಸಮಾಧಾನಗೊಂಡಿದ್ದಾರೆ