ತಿರುವನಂತಪುರಂ –
ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿ ಸಿದಂತೆ ಕೇರಳ ಉನ್ನತ ಶಿಕ್ಷಣ ಮತ್ತು ಅಲ್ಪಸಂಖ್ಯಾ ತರ ಕಲ್ಯಾಣ ಸಚಿವ ಕೆ.ಟಿ.ಜಲೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಸಚಿವರು ತಮ್ಮ ಸೋದರ ಸಂಬಂಧಿಗೆ ವಿದ್ಯಾರ್ಹತೆ ಬದಲಿಸಿ, ಸರ್ಕಾರಿ ನೌಕರಿ ಕೊಡಿಸುವ ಮೂಲಕ ತಮ್ಮ ಅಧಿಕಾರ ದುರುಪ ಯೋಗ ಪಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ದಲ್ಲಿ ದೂರು ದಾಖಲಾಗಿತ್ತಲ್ಲದೇ ಅಧಿಕಾರ ದುರುಪ ಯೋಗ ಪಡಿಸಿಕೊಂಡಿರುವ ಸಚಿವರಿಗೆ ಹುದ್ದೆಯಲ್ಲಿ ಮುಂದುವರೆಯುವ ಅರ್ಹತೆ ಇಲ್ಲ ಎಂದು ಲೋಕಾ ಯುಕ್ತರು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಕೆ.ಟಿ.ಜಲೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರ ಸ್ವೀಕರಿಸಿರುವ ಸಿಎಂ ಪಿಣರಾಯಿ ವಿಜಯನ್, ರಾಜ್ಯಪಾಲರಿಗೆ ರವಾನಿಸಿದ್ದಾರೆ.ಕೆ.ಟಿ.ಜಲೀಲ್ ತಮ್ಮ ಸಂಬಂಧಿಕರಾದ ಟಿ.ಕೆ.ಅಬೀದ್ ಎಂಬುವವ ರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪರೇಷನ್ ನಲ್ಲಿ ಕೆಲಸ ನೀಡಿದ್ದರು.ಅಲ್ಲದೇ ಅದಕ್ಕಾಗಿ ಪ್ರಸ್ತುತ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಯಲ್ಲಿ ತಿದ್ದುಪಡಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು