ಧಾರವಾಡ –
ಕಳೆದ ಐದು ದಿನಗಳಿಂದ ಧಾರವಾಡದಲ್ಲಿ ನಡೆಯುತ್ತಿದ್ದ ಕ್ರಿಕೇಟ್ ಪಂದ್ಯಾವಳಿಗೆ ತೆರೆ ಬಿದ್ದಿದೆ. ಅಂತಿಮವಾಗಿ ಇಂದು ನಡೆದ ಪಂದ್ಯಗಳಲ್ಲಿ ಕುರುಬಗಟ್ಟಿಯ ಮೋಹನ ಭಾಗವತ ತಂಡ ಪ್ರಥಮ ಸ್ಥಾನ, ಗುಳೇದಕೊಪ್ಪದ ಪ್ರದೀಪ ಶೆಟ್ಟರ್ ತಂಡ ದ್ವೀತಿಯ ಸ್ಥಾನ, ನೀರಲಕಟ್ಟಿಯ ಸ್ವಾಮಿ ವಿವೇಕಾನಂದ ತಂಡ ತೃತೀಯ ಸ್ಥಾನ ಇನ್ನೂ ಬೇಲೂರಿನ ರಾಜನಾಥಸಿಂಗ್ ತಂಡ ನಾಲ್ಕನೇಯ ಸ್ಥಾನ ಪಡೆದುಕೊಂಡವು.
ಧಾರವಾಡ ಜಿಲ್ಲಾ ಸಂಸದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬಿಜೆಪಿ ಗ್ರಾಮೀಣ ಯುವ ಮೋರ್ಚಾ ದವರು ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಕಳೆದ 21 ರಿಂದ ಆರಂಭಗೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಇಂದು ಅಂತಿಮವಾಗಿ ತೆರೆ ಬಿದ್ದಿತು.
ಅಂತಿಮವಾಗಿ ನಾಲ್ಕು ತಂಡಗಳು ಪ್ರಶಸ್ತಿಯನ್ನು ಪಡೆದುಕೊಂಡವು. ಬಿಜೆಪಿ ಯುವ ಮೋರ್ಚಾದ ಗ್ರಾಮೀಣ ಘಟಕ ಅಧ್ಯಕ್ಷ ಶಂಕರ ಕೋಮಾರ ದೇಸಾಯಿ ನೇತ್ರತ್ವದಲ್ಲಿ ಈ ಒಂದು ಟೂರ್ನಾಮೆಂಟ್ ನ್ನು ಆಯೋಜಿಸಲಾಗಿತ್ತು. ಧಾರವಾಡ ತಾಲ್ಲೂಕಿನ 36 ತಂಡಗಳು ಪಾಲ್ಗೊಂಡಿದ್ದು ಅಂತಿಮವಾಗಿ ಇಂದು ನಡೆದ ಪೈನಲ್ ಪಂದ್ಯಗಳಲ್ಲಿ ನಾಲ್ಕು ತಂಡಗಳನ್ನು ಪ್ರಶಸ್ತಿಗಳನ್ನು ಪಡೆದುಕೊಂಡವು.
ಇಂದು ಸಮಾರೋಪ ಸಮಾರಂಭ ನಡೆಯಿತು. ನಗರದ ಕೃಷಿ ವಿಶ್ವವಿದ್ಯಾಲದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು, ಶಶಿ ಕುಲಕರ್ಣಿವೈ ಎನ್ ಪಾಟೀಲ ಶಂಕರ ಕೋಮಾರದೇಸಾಯಿರುದ್ರಪ್ಪ ಅರಿವಾಳ ಯಲ್ಲಪ್ಪ ಜಾನೂಕನವರ ಸಂಬಾಜಿ ಜಾಧವ ಮಲ್ಲಿಕಾರ್ಜುನ ಗೋಕಾವಿ ಸೇರಿದಂತೆ ಯುವ ಮೋರ್ಚಾದ ಮುಖಂಡರು ಕಾರ್ಯಕರ್ತರು ಕ್ರೀಡಾ ಪ್ರೇಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.