ಭೋಪಾಲ್ –
ಮಾಜಿ ಮುಖ್ಯಮಂತ್ರಿ ಮಗ,ಮೊಮ್ಮಗ ಹಾಗೂ ಸೊಸೆಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಮಧ್ಯ ಪ್ರದೇಶ ದ ಭೋಪಾಲ್ ನಲ್ಲಿ ನಡೆದಿದೆ. ಮಧ್ಯಪ್ರದೇಶದ ಜನತೆಗೆ ಒಂದು ಶಾಕ್ ಕಂಡು ಬಂದಿದ್ದು ಮಾಜಿ ಉಪಮುಖ್ಯಮಂತ್ರಿಗಳ ಮಗ ಸೊಸೆ ಮತ್ತು ಮೊಮ್ಮಗಳನ್ನು ಯಾರೋ ದುಷ್ಕ ರ್ಮಿಗಳು ಕೊಲೆ ಮಾಡಿದ್ದಾರೆ ಎಸ್ಕೇಪ್ ಆಗಿದ್ದಾರೆ
ಮಾಜಿ ಉಪಮುಖ್ಯಮಂತ್ರಿ ಪ್ಯಾರೆಲಾಲ್ ಕನ್ವಾರ್ ಅವರ ಮಗ ಹರೀಶ್ ಕನ್ವಾರ್, ಸೊಸೆ ಸುಮಿತ್ರ ಕನ್ವಾರ್ ಮತ್ತು ಐದು ವರ್ಷದ ಮೊಮ್ಮಗಳು ಆಶಿ ಕನ್ವಾರ್ನನ್ನು ಕೊಲೆ ಮಾಡಲಾಗಿದೆ.
ಈ ಕುಟುಂಬ ಛತ್ತೀಸ್ ಘಡ್ ಕೋಬ್ರಾ ಜಿಲ್ಲೆಯಲ್ಲಿ ವಾಸವಿದ್ದು, ಅವರ ಮನೆಯಲ್ಲೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀ ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳ ನ್ನು ಪತ್ತೆ ಹಚ್ಚಲಾಗುವುದು ಎಂದು ಕೋಬ್ರಾ ಜಿಲ್ಲೆ ಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ
ಇನ್ನೂ ಸುದ್ದಿ ತಿಳಿದ ರಾಜಕೀಯ ನಾಯಕರು ಸ್ಥಳಕ್ಕೆ ತೆರಳಿ, ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ