This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಧಾರವಾಡದ ಕೃಷಿ ವಿವಿ ಇಬ್ಬರು ಮಹಿಳಾ ನೌಕರರ ಸಾವಿನ ಪ್ರಕರಣ – ಮತ್ತಷ್ಟು ದಾಖಲೆಗಳು ಬಿಡುಗಡೆ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡದ ಕೃಷಿ ವಿ.ವಿ ಯ ಇಬ್ಬರು ಮಹಿಳೆಯರ ಸಾವಿನ ಪ್ರಕರಣ ಕುರಿತು ಕಾಂಗ್ರೆಸ್ ಪಕ್ಷದ ಮುಖಂ ಡರು ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ ದ್ದಾರೆ. ಹೌದು ಧಾರವಾಡದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಒತ್ತಾಯವನ್ನು ಮಾಡಿದರು.

ಕೃಷಿ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರಾದ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದರಲ್ಲಿ ಅನೇಕ ಪ್ರಭಾವಿತರು ಶಾಮೀಲಾಗಿರುವದರಿಂದ ಪ್ರಕರಣವನ್ನು ತಿರುಚುವ ಸಾಧ್ಯತೆ ಇದ್ದು ಕೂಡ ಲೇ ಈ ಪ್ರಕರಣವನ್ನು ಸಿ.ಬಿ.ಐಗೆ ವಹಿಸು ವಂತೆ ಕಾಂಗ್ರೆಸ್ ಪಕ್ಷದ ಮುಖಂಡ ರಾಬರ್ಟ್ ದದ್ದಾಪೂರಿ ಒತ್ತಾಯ ಮಾಡಿದರು

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ರಾಬರ್ಟ್ ದದ್ದಾಪುರಿ ಹಾಗೂ
ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ಮಾತನಾ ಡಿದ ಅವರು ಪ್ರಕರಣವನ್ನು ಆಗ್ರಹಿಸಿದರು.ಮೃತರ ಪಾಲಕರು ಪೋಲಿಸ್ ಠಾಣೆಯಲ್ಲಿ ಆತ್ಯಾಚಾರ ಹಾಗೂ ಕೊಲೆ ಪ್ರಕರಣವೆಂದು ದಾಖಲಾಗಿರುವುದ ರಿಂದ ಈ ಕೂಡಲೆ ಕೃಷಿ ಸಚಿವರನ್ನು ಸಂಪುಟದಿಂದ ಮುಖ್ಯಮಂತ್ರಿಗಳು ವಜಾ ಮಾಡಬೇಕು ಹಾಗೂ ಪ್ರಕರಣ ಸಿಬಿಐ ಗೆ ವಹಿಸಬೇಕೆಂದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವೆ ಯನ್ನು ಮಾಡುತ್ತಿದ್ದ ಕುಮಾರಿ ಮೇಘನಾ ಸಿಂಗ ನಾಥ , ಕುಮಾರಿ ರೇಖಾ ಕೊಕಟನೂರ ಹಾಗೂ ಎಂ.ಎ. ಮುಲ್ಲಾ ಮತ್ತು ಯು.ಬಿ. ಮೇಸ್ತ್ರಿ ಅವರು ಗಳು ಪ್ರಯಾಣಿಸುತ್ತಿದ್ದ ಕಾರು ಉತ್ತರಕನ್ನಡ ಜಿಲ್ಲೆಯ ಮಾಸ್ತಿಕಟ್ಟ ಎಂಬ ಸ್ಥಳದಲ್ಲಿ 31-01- 2021 ರಂದು ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಡಿಕ್ಕಿ ಹೊಡೆದು ಅಪಘಾತವು ಸಂಭವಿಸಿ ಅದರಲ್ಲಿಯ ಕೃಷಿ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರಾದ ಉಭಯ ಮಹಿಳೆಯರು ಸಾವಿಗೀಡಾಗಿದ್ದು ಇದ್ದು ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಅಪರಾಧ ಸಂಖ್ಯೆ 0024/2021 ದಲ್ಲಿ ದಾಖಲಾಗಿದ್ದು ಎಂದರು.

ಪ್ರಪ್ರಥಮವಾಗಿ ಈ ಅಪಘಾತವನ್ನು ಸಂಚು ಮತ್ತು ಸಂಶಯಗಳಿಂದ ಕೂಡಿದ್ದಾಗಿದೆ ಎಂದು ಕಾಂಗ್ರೆಸ್ ಪಕ್ಷವು ಅಪಾಧಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ತನಿಖೆಗೆ ಆಗ್ರಹಿಸಿತ್ತು . ತದನಂತರ ಕೆಲವು ಸಂಘಟನೆಗಳು ಈ ಪ್ರಕರಣದ ತನಿಖೆಗಾಗಿ ಒತ್ತಾಯಿಸಿದ್ದರು.ಆದರೆ ಈ ಪ್ರಕರಣವನ್ನು ಪ್ರಪ್ರಥ ಮ ಬಾರಿ ತನಿಖೆಗೆ ಒಳಪಡಿಸಲು ಆಗ್ರಹಿಸಿದ್ದೆವೆ ಎಂದರು.

ಪ್ರಸಕ್ತ ಈ ಪ್ರಕರಣ ಕುರಿತು ಮೃತರ ಪಾಲಕರು ಪೋಲಿಸ್ ಠಾಣೆಯಲ್ಲಿ ಆತ್ಯಾಚಾರ ಹಾಗೂ ಕೊಲೆ ಪ್ರಕರಣವೆಂದು ದಾಖಲಾಗಿರುವು.ದು ಅವಶ್ಯವು ಕೂಡಾ ಆಗಿತ್ತು ಎಂಬುದನ್ನು ಇಲ್ಲಿ ಒತ್ತಿ ಹೇಳುತ್ತೇವೆ. ಗುತ್ತಿಗೆ ಆಧಾರದ ಮಹಿಳೆಯರನ್ನು ಕಚೇರಿ ಕೆಲಸ ಕ್ಕಾಗಿ ಬಾಗಲಕೋಟ ಕರೆದುಕೊಂಡು ಹೋಗುವು ದಾಗಿ ಅವರಿಗೆ ತಿಳಿಸಲಾಗಿತ್ತು .

ಆದರೆ ಅವರೊಟ್ಟಿಗೆ ಕಾರಿನಲ್ಲಿದ್ದ ಸದರಿ ಉಭಯ ಪುರುಷರು ಅವರನ್ನು ಒತ್ತಾಯ ಪೂರ್ವಕವಾಗಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದರು ಎಂಬುದು ಈ ಹಿಂದಿನಿಂದಲೂ ನಾವು ಆಪಾಧಿಸಿದ್ದು ಇದೆ ಆದು ಪ್ರಸಕ್ತ ಅವರ ಪಾಲಕರ ದೂರಿನಿಂದ ದೃಢಪಟ್ಟಿರುತ್ತದೆ.ಈ ಹಿಂದೆ ಕೃಷಿ ಸಚಿವರಾದ ಬಿ.ಸಿ. ಪಾಟೀಲ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲ ಯಕ್ಕೆ ಕಾರ್ಯಕ್ರಮಗೊಸ್ಕರ ಬಂದಾಗ ಈ ಅಪಘಾ ತ ಪ್ರಕರಣವನ್ನು ಕುರಿತು ಅವರ ಗಮನಕ್ಕೆ ತೆಗೆದು ಕೊಂಡು ಬಂದಾಗ ಅವರು ಸಂಪೂರ್ಣವಾಗಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಪರವಾಗಿಯೇ ಮಾತನಾಡಿರುವುದು ಖಂಡನೀಯ ಎಂದರು.

ಈ ಪ್ರಕರಣದಲ್ಲಿ ಪ್ರಕ್ಷಪಾತ ತನಿಖೆಯನ್ನು ಕೈಗೊಳ್ಳ ಬೇಕಾಗಿದ್ದ ಸಂಬಂಧಿತ ಕೃಷಿ ಸಚಿವರೇ ಪಕ್ಷಪಾತ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಪ್ರಕರಣದಲ್ಲಿ ಪ್ರಥಮ ಆರೋಪಿಯನ್ನಾಗಿ ಕೃಷಿ ವಿಶ್ವವಿದ್ಯಾಲಯದ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿ ರುವ ಕುಲಪತಿಗಳನ್ನು ಮಾಡಬೇಕು ಮುಖ್ಯಮಂತ್ರಿ ಗಳನ್ನು ಒತ್ತಾಯಿಸುತ್ತೇವೆ ಎಂದರು.

ಇನ್ನೂ ಈ ಪ್ರಕರಣದಲ್ಲಿ ಅನೇಕ ಪ್ರಭಾವಿಗಳ ಕುಮ್ಮಕ್ಕು ಕೈವಾಡ ಹಾಗೂ ಸಂಚು ಇರುವುದನ್ನು ನಾವು ಪುನರುಚ್ಚರಿಸುತ್ತೇವೆ . ಮೃತರ ಮಾಲಕರಿಂದ ಆತ್ಯಾಚಾರ ಹಾಗೂ ಕೊಲೆ ಪ್ರಕರಣವು ಪೊಲೀಸ್ ರಾಣೆಯಲ್ಲಿ ದಾಖಲಾಗಿದ್ದು ಇದೆ ಆದರೆ ಪ್ರಭಾವಿಗ ಳು ಈ ಪ್ರಕರಣವನ್ನು ತಿರುಚುವ ಮುಚ್ಚಿ ಹಾಕುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಈ ಕೂಡಲೇ ಈ ಪ್ರಕರಣವನ್ನು ಮುಖ್ಯ ಮಂತ್ರಿಗಳು ಸಿಬಿಐ ಗೆ ವಹಿಸಬೇಕೆಂದು ಒತ್ತಾಯ ಮಾಡಿದರು


Google News

 

 

WhatsApp Group Join Now
Telegram Group Join Now
Suddi Sante Desk