ಧಾರವಾಡ –
ಬಿಡುವಿಲ್ಲದ ಕೆಲಸ ಕಾರ್ಯದ ನಡುವೆಯೂ ಧಾರ ವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಮ್ ಎಲ್ ಹಂಚಾಟೆ ಯವರು ಒಳ್ಳೆಯ ಕಾರ್ಯವನ್ನು ಮಾಡತಾ ಇದ್ದಾರೆ.ಹೌದು ರಾಜ್ಯದಲ್ಲಿ ಒಂದು ಕಡೆ ಮಹಾಮಾರಿ ಕೋವಿಡ್ ನ ಎರಡ ನೇಯ ಅಲೆ ಅಬ್ಬರ ಹೆಚ್ಚಾಗುತ್ತಿದೆ ಇದರಿಂ ದಾಗಿ ರಾಜ್ಯದಲ್ಲಿ SSLC, PUC ಪರೀಕ್ಷೆಗಳು ನಡೆ ಯುತ್ತವೆ ಇಲ್ಲ ಗೊತ್ತಿಲ್ಲ ಇವೆಲ್ಲದರ ನಡುವೆ ಕಚೇರಿ ಯಲ್ಲಿ ಆ ಸಭೆ ಈ ಸಭೆ ಅನ್ನುತ್ತಾ ಕೈಕಟ್ಟಿ ಸುಮ್ಮನೆ ಕುಳಿತು ಕೊಳ್ಳದೇ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ರ ಕುಶಲೋಪರಿ ವಿಚಾರಣೆ ಮಾಡತಾ ಅವ ರೊಂದಿಗೆ ಸಂವಾದ ಮಾಡತಾ ಇದ್ದಾರೆ
ಹೌದು SSLC ಪರೀಕ್ಷೆಯನ್ನು ಗಮನದಲ್ಲಿಟ್ಟು ಕೊಂಡು ಎಸ್.ಎಸ್.ಎಲ್.ಸಿ ಇಂಗ್ಲಿಷ್ ವಿಷಯದ ಆನ್ ಲೈನ್ ತರಗತಿಯಲ್ಲಿ ಇಂದು ಮಕ್ಕಳಿಗೆ ಮತ್ತು ಶಿಕ್ಷಕ ರಿಗೆ ಪಾಠ ಮಾಡಿದರು. ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆಯವರು ಪಾಲ್ಗೊಂಡು ಮಕ್ಕಳಿಗೆ ಪರೀಕ್ಷಾ ಪೂರ್ವತಯಾರಿ ಬಗ್ಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
ಧಾರವಾಡ ತಾಲ್ಲೂಕಿನ 127 ಮಕ್ಕಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಪಾಲ್ಗೊಂಡು ಕುಶಲೋಪರಿ ವಿಚಾರಿ ಸಿ ಪಾಠ ಮಾಡಿದರು.ಪಾಠ ಮಾಡಿದ್ದನ್ನು ನೋಡಿ ಎಲ್ಲಾ ಶಿಕ್ಷಕರು ಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪ್ಪಿನ ಬೆಟಗೇರಿಯ ಎಸ್.ಜಿ.ವಿ.ಸಂ.ಪ.ಪೂ. ಮಹಾವಿದ್ಯಾಲಯ ಉಪ್ಪಿನಬೆಟಗೇರಿ ಮಕ್ಕಳಿಗೆ ಹಾಗೂ ತಾಲ್ಲೂಕಿನ ಇತರೆ SSLC ಮಕ್ಕಳು ಉತ್ಸಾ ಹದಿಂದ ಪಾಲ್ಗೊಂಡು DDPI ಅವರ ಪಾಠ ಮತ್ತು ಪರೀಕ್ಷಾ ಕುರಿತ ಪೂರ್ವ ತಯಾರಿಕೆಯ ಮಾತುಗಳ ನ್ನು ಕೇಳಿದರು.
ನಿಜವಾಗಿಯೂ ಬಿಡುವಿಲ್ಲದ ಕೆಲಸ ಕಾರ್ಯದ ನಡುವೆ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇ ಶಕರಾಗಿರುವ ಇವರು ಕೆಲ ಸಮಯವನ್ನು ಬಿಡುವು ಮಾಡಿಕೊಂಡು ಜಿಲ್ಲೆಯ ಮಕ್ಕಳ ಶಿಕ್ಷಕರ ಕುಶ ಲೋಪರಿ ವಿಚಾರಣೆ ಮಾಡಿ SSLC ಮಕ್ಕಳಿಗೆ ಪರೀಕ್ಷೆ ಕುರಿತು ಪಾಠ ಮಾಡತಾ ಇದ್ದಾರೆ. ಒಟ್ಟಾರೆ ಏನೇ ಆಗಲಿ DDPI ಮೋಹನಕುಮಾರ್ ಹಂಚಾಟೆ ಯವರು ಒಳ್ಳೆಯ ಕೆಲಸ ಮಾಡತಾ ಇದ್ದಾರೆ ನಿಜ ವಾಗಿಯೂ ಮೆಚ್ಚುವಂತದ್ದು