ಲಕ್ನೊ –
ಕೋವಿಡ್ ಲಸಿಕೆ ತಗೆದುಕೊಳ್ಳದಿದ್ದರೆ ಸರ್ಕಾರಿ ನೌಕರರಿಗೆ ವೇತನವಿಲ್ಲ ಹೀಗೊಂದು ಮೌಖಿಕ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿ ದ್ದಾರೆ.ಹೌದು ಕೊರೋನ ಸೋಂಕಿನ ವಿರುದ್ಧದ ಲಸಿಕೆ ಕರಣ ಅಭಿಯಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರಪ್ರದೇಶದ ಫಿರೋಝಾಬಾದ್ ಜಿಲ್ಲಾಡಳಿತ ಹೀಗೆ ಹೊರಡಿಸಿರುವ ಆದೇಶದಲ್ಲಿ, ಸರಕಾರಿ ನೌಕರರು ಲಸಿಕೆ ಹಾಕಿಸಿಕೊಳ್ಳದಿದ್ದರೆ ವೇತನ ಪಾವತಿಸುವುದಿಲ್ಲ ಎಂದು ಸೂಚಿಸಲಾಗಿದೆ
ಲಸಿಕೆ ಇಲ್ಲದಿದ್ದರೆ ವೇತನವೂ ಇಲ್ಲ ಎಂಬ ಮೌಖಿಕ ಆದೇಶವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರವಿಜ ಯ್ ಸಿಂಗ್ ಹೊರಡಿಸಿದ್ದಾರೆ.ಈ ಆದೇಶದ ಪ್ರಕಾರ ಲಸಿಕೆ ಪಡೆಯದ ನೌಕರರ ತಿಂಗಳ ವೇತನ ತಡೆಹಿಡಿ ಯುವ ಜೊತೆಗೆ ಇಲಾಖಾ ಕ್ರಮವನ್ನು ಕೈಗೊಳ್ಳಲಾ ಗುತ್ತದೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಹೇಳಿ ದ್ದಾರೆ.ಆದೇಶ ಜಾರಿಗೊಳಿಸುವಂತೆ ಜಿಲ್ಲಾ ಖಜಾನಾ ಧಿಕಾರಿಗೆ ಮತ್ತು ವಿಭಾಗೀಯ ಮುಖ್ಯಸ್ಥರಿಗೆ ನಿರ್ದೇ ಶಿಸಲಾಗಿದೆ.
ಜೊತೆಗೆ ಲಸಿಕೆ ಪಡೆದವರ ಪಟ್ಟಿಯನ್ನು ಸಿದ್ಧಪಡಿಸು ವಂತೆ ಸೂಚಿಸಲಾಗಿದೆ.ವೇತನಕ್ಕೆ ತಡೆಯಾಗಬಹು ದು ಎಂಬ ಭಯದಿಂದ ಸಿಬ್ಬಂದಿ ಗಳು ಲಸಿಕೆ ಪಡೆ ಯುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರಂತೆ