ಧಾರವಾಡ –
ಕೋವಿಡ್-19 ತಡೆಗಟ್ಟುವ ಹಿನ್ನಲೆಯಲ್ಲಿ ಸಾರ್ವ ಜನಿಕರ ಆರೋಗ್ಯ ಕಾಪಾಡುವ ದೃಷ್ಠಿಯಿಂದ
ಜೂನ್ 7ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 14 ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಾಂತ ಲಾಕ್ ಡೌನ್ ಜಾರಿಗೊಳಿಸಿ ಪರಿಷ್ಕೃತ ಆದೇಶ ಹೊರಡಿ ಸಿದ್ದು ನಾಳೆಯಿಂದ ಕೆಲವು ಅಂಗಡಿ ಮುಂಗಟ್ಟು ಗಳ ಆರಂಭಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೊಸದೊಂದು ಆದೇಶ ಹೊರಡಿಸಿದ್ದಾರೆ

ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡದಂತೆ ಪರಿಣಾಮಕಾರಿಯಾದ ಅನುಸರಣಾ ಕ್ರಮ ಜರುಗಿಸುವದಕ್ಕಾಗಿ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿ ಯಿಂದ ಮುಂಜಾಗೃತಾ ಕ್ರಮವಾಗಿ ಧಾರವಾಡ ಜಿಲ್ಲೆಯಾದ್ಯಂತ ಜೂನ್ 7, 2021 ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 14 ಬೆಳಿಗ್ಗೆ 6 ಗಂಟೆಯವರೆಗೆ ಲಾಕ್‍ಡೌನ್ ಮುಂದುವರಿಸಿ ಪರಿಷ್ಕೃತ ಆದೇಶ ವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಿಂದ ಈಗಾಗಲೇ ದಿನಾಂಕ 23-5-2021 ರಂದು ಹೊರಡಿಸಿರುವ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯ ವಾಗಿ ಪಾಲಿಸಲು ಮತ್ತು ಅವುಗಳೊಂದಿಗೆ ನೀಡಿ ರುವ ಕೇಲವು ಅಂಶಗಳನ್ನು ತಪ್ಪದೆ ಪಾಲಿಸಬೇ ಕೆಂದು ಪರಿಷ್ಕೃತ ಆದೇಶದಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.
ಯಾವುದಕ್ಕೆ ಅವಕಾಶ ಎಷ್ಟು ಸಮಯ ನೀಡಿದ್ದಾರೆ

ನಾಳೆಯಿಂದ ಜಿಲ್ಲೆಯಲ್ಲಿ ಆಹಾರ, ದಿನಸಿ, ಬೇಕರಿ, ಕಿರಾಣಿ, ಹಣ್ಣು ಮತ್ತು ತರಕಾರಿ, ಡೈರಿ, ಹಾಲಿನ ಬೂತುಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ದಿನಾಂಕ: 07-06-2021 ರಿಂದ 14-06-2021 ರವರೆಗೆ ಬೆಳಿಗ್ಗೆ 6 ಗಂಟೆ ಯಿಂದ ಬೆಳಿಗ್ಗೆ 10 ಗಂಟೆಯವರೆಗೆ ತೆರೆಯಲು ಅವಕಾಶವಿರುತ್ತದೆ.

ನ್ಯಾಯ ಬೆಲೆ ಅಂಗಡಿಗಳು ದಿನಾಂಕ: 07-06-2021 ರಿಂದ 14-06-2021 ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ ತೆರೆಯಲು ಅವಕಾಶವಿರುತ್ತದೆ.
ಧಾರವಾಡ ಜಿಲ್ಲೆಯಾದ್ಯಂತ ದಿನಾಂಕ:07-06-2021 ರಿಂದ 14-06-2021 ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಹೋಟೆಲ್ ಅಂಗಡಿಗಳು ಕೋವಿಡ್ ಸುರಕ್ಷತಾ ಕ್ರಮಗಳೊಂದಗೆ ಆಹಾರ ಪದಾರ್ಥಗಳನ್ನು ಕೇವಲ ಪಾರ್ಸಲ್ ಕೊಡುವುದಕ್ಕೆ ಅವಕಾಶವಿರುತ್ತದೆ.
ಧಾರವಾಡ ಜಿಲ್ಲೆಯಾದ್ಯಂತ ದಿನಾಂಕ:07-06-2021 ರಿಂದ 14-06-2021 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 8 ಗಂಟೆಯವರೆಗೆ ಹೊಟೇಲ್ ಅಂಗಡಿಗಳು ತೆರೆದು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೇವಲ ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿರುತ್ತದೆ.
ಧಾರವಾಡ ಜಿಲ್ಲೆಯಾದ್ಯಂತ ದಿನಾಂಕ:07-06-2021 ರಿಂದ 14-06-2021 ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಮದ್ಯದ ಅಂಗಡಿಗಳನ್ನು ತೆರೆದು ಕೋವಿಡ್ ಸುರಕ್ಷತಾ ಕ್ರಮದೊಂದಿಗೆ ಕೇವಲ ಪಾರ್ಸಲ್ ಕೋಡುವುದಕ್ಕೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪರಿಷ್ಕೃತ ಲಾಕ್‍ಡೌನ್ ಆದೇಶದಲ್ಲಿ ತಿಳಿಸಿದ್ದಾರೆ.