ಕುಂದಗೋಳ –
ಕುಂದಗೋಳ ಪೊಲೀಸ್ ಠಾಣೆಗೆ ನೂತನವಾಗಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಎಂ ಎಂ ದೇಶನೂರು ವರ್ಗಾವಣೆಯಾಗಿ ನಿನ್ನೆ ಅಧಿಕಾರ ವಹಿಸಿಕೊಂಡರು

ವರ್ಗಾವಣೆ ಹಿನ್ನಲೆಯಲ್ಲಿ ನಿನ್ನೆ ಕುಂದಗೋಳ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರ ವಹಿಸಿ ಕೊಂಡರು.ಕಚೇರಿಗೆ ಆಗಮಿಸಿದ ಇವರನ್ನು ಠಾಣೆ ಯ ಎಲ್ಲಾ ಸಿಬ್ಬಂದಿಗಳು ಸ್ವಾಗತಿಸಿದರು

ಇನ್ನೂ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿ ದ ಇನ್ಸ್ಪೆಕ್ಟರ್ ಅವರನ್ನು ಸ್ಥಳೀಯ ಹಲವು ಸಂಘ ಟನೆಯ ಮುಖಂಡರು ಕಾರ್ಯಕರ್ತರು ಹಾಗೂ ಇತರರು ಅಭಿಮಾನದಿಂದ ಸ್ವಾಗತಿಸಿದರು

ಸ್ವಾಗತ ಮಾಡಿದ್ದು ಅಧಿಕಾರ ವಹಿಸಿಕೊಂಡಿದ್ದು ಎಲ್ಲವೂ ಸರಿ ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಇನ್ಸ್ಪೆಕ್ಟರ್ ಸಾಹೇಬರು ಮಾಸ್ಕ್ ಹಾಕೊದನ್ನು ಮರೆತಿದ್ದಾರೆ ಸಾಮಾಜಿಕ ಅಂತರ ವಿಲ್ಲ ಇದನ್ನೇಲ್ಲ ವನ್ನೂ ಮರೆತಂತೆ ಕಂಡು ಬಂದಿತು.

ಕರೋನಾ ಸಮಯದಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಪೊಲೀಸ್ ಇನ್ಸ್ಪೆಕ್ಟರ್ ಸಾಮಾಜಿಕ ಅಂತರ ಮತ್ತು ಮಾಸ್ಕ ಮರೆತ ಪೊಲೀಸ್ ಅಧಿಕಾರಿ ಹೊಸದಾಗಿ ಬಂದು ತಾವೇ ಹೀಗೆ ಮಾಡಿದ್ದು ಸರಿನಾ ಎಂಬ ಪ್ರಶ್ನೆಯನ್ನು ಕುಂದಗೋಳ ನಿವಾಸಿಗಳು ಕೇಳುತ್ತಿದ್ದಾರೆ.ಕಾನೂನು ಹೇಳುವವರೇ ಕಾನೂನು ಮರೆತರೆ ಹೇಗೆ ಸಾರ್ ಸಾರ್ವಜನಿಕರಿಗೆ ಒಂದು ನ್ಯಾಯ ನಿಮಗೊಂದು ನ್ಯಾಯನಾ ಅಂತಾ ಸಾರ್ವಜನಿಕರೇ ಸಾಮಾಜಿಕ ಜಾಲ ತಾಣಗಳಲ್ಲಿ ಕೇಳತಾ ಇದ್ದಾರೆ ಎಸ್ಪಿ ಸಾರ್.