ಧಾರವಾಡ –
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಇಂದು ಪಿಎಸ್ಐ ಆಗಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಮಾರಿ ರತ್ನ ಸುಂಕಪ್ಪ ಕುರಿ ಇವರು ಈ ಕರೋನ ಕಾರಣದಿಂದ ಸಂಕಷ್ಟಕ್ಕೆ ಒಳಗಾದ ತನ್ನ ಹುಟ್ಟೂರಿನ ಬಡ ಜನರಿಗೆ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಮೂಲಕ ಆಹಾರ ಸಾಮಗ್ರಿಗಳನ್ನು ನೀಡಿ ಮಾದರಿ ಅಧಿಕಾರಿ ಎನಿಸಿ ಕೊಂಡಿದ್ದಾರೆ
ಇವರ ಈ ಕಾರ್ಯವನ್ನು ಮೆಚ್ಚಿದ ಸಂಸ್ಥೆಯ ಗೌರ ವಾದ್ಯಕ್ಷರಾದ ಭೀಮಪ್ಪ ಕಾಸಾಯಿ ಅಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಅಕ್ಬರಲಿ ಸೋಲಾಪುರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಕೋಶಾದ್ಯಕ್ಷರಾದ ಅಜೀತಸಿಂಗ ರಜಪೂತ, ಚನಬಸಪ್ಪ ಲಗಮಣ್ಣವರ,ಮಂಜುನಾಥ ವಾಸಂಬಿ,
ಕಲ್ಪನ ಚಂದನಕರ, ಶರಣು ಪೂಜಾರ, ಎಂ ಐ ದೀವಟಗಿ,ರುದ್ರೇಶ ಕುರ್ಲಿ, ಸಮಾಜ ಸೇವಕರಾದ ಸುಮಂಗಲಾ ಕೌದೆಣ್ಣವರ, ಬಸವರಾಜ ಹಡಪದ ಬಸವರಾಜ ಲಕ್ಕಮ್ಮನವರ ಹೂವಪ್ಪ ಸೂರ್ಯ ವಂಶಿ ಶಿವಾನಂದ ಹೂಗಾರ, ಶಿವಾನಂದ ರಾಮನ ಗೌಡರ ಮುತ್ತು ಮೊರಬದ, ಮಹಾದೇವ ಹೂಗಾರ, ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದರು, ಇದು ವರೆಗೆ ಎರಡು ನೂರು ಕುಟುಂಬಗಳಿಗೆ ಸಂಸ್ಥೆಯು ದಾನಿಗಳಿಂದ ಅಹಾರದ ಸಾಮಗ್ರಿಗಳನ್ನು ಸಂಗ್ರಹಿಸಿ ವಿತರಿಸಿದೆ,