ಧಾರವಾಡ –
ಮಹಾಮಾರಿ ಕೋವಿಡ್ ನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿ ಕೆಲಸ ಕಾರ್ಯವನ್ನು ಮಾಡಿದ ಕರೋನ ವಾರಿಯರ್ಸ್ ನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಗುರುತಿಸಿ ಗೌರವಿಸಿದ್ದಾರೆ
ಹೌದು ಧಾರವಾಡ ಗ್ರಾಮೀಣ ಪ್ರದೇಶಗಳಲ್ಲಿ ಮಹಾಮಾರಿನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ ಮುಂಚೂಣಿಯಲ್ಲಿರುವ ಬೇರೆ ಬೇರೆ ವಲಯದ ವಾರಿಯರ್ಸ್ ಗಳನ್ನು ಶಾಸಕ ಅಮೃತ ದೇಸಾಯಿ ಇಂದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಸೇವೆಯನ್ನು ಗುರುತಿಸಿ ಗೌರವಿಸಿದರು
ಮೊದಲು ಗರಗ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕೋವಿಡಕೇರಗೆ ತೆರಳಿ ಅಲ್ಲಿಯ ವ್ಯವಸ್ಥೆಗಳನ್ನು ವೀಕ್ಷಿಸಿದರು.
ನಂತರ ಕೊರೊನಾ ಮಹಾಮಾರಿಯ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದಲ್ಲಿ ಶ್ಲಾಘನೀಯ ಕಾರ್ಯ ನಿರ್ವ ಹಿಸಿದ ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗ ನವಾಡಿ ಕಾರ್ಯಕರ್ತೆಯರು,ಹಾಗೂ ಪಂಚಾಯತಿ ಯ ಸಿಬ್ಬಂದಿ ವರ್ಗಕ್ಕೆ ಅಮೃತ ದೇಸಾಯಿಯವರ ಗೆಳೆಯರ ಬಳಗ (ರಿ) ದ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಾ ದಂಡಾಧಿಕಾರಿಗಳು ಸಂತೋಷ ಬಿರಾದಾರ ಮಂಡಳ ಅಧ್ಯಕ್ಷರಾದ ರುದ್ರಪ್ಪ ಅರಿವಾಳ,ಗರಗ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕಾಶಿಗಾರ ಉಪಾಧ್ಯಕ್ಷ ರಾದ,ಪಕ್ಕೀರಪ್ಪ ಕಟ್ಟಿಮನಿ ,ನಾಗನಗೌಡ ಪಾಟೀಲ್ ಸಂಬಾಜಿ ಜಾಧವ್,ಶಂಕರ ಕೋಮಾರ ದೇಸಾಯಿ , ಅರವಿಂದಗೌಡ ಪಾಟೀಲ್ ಸೇರಿದಂತೆ ಅಮೃತ ದೇಸಾಯಿ ಗೆಳೆಯರ ಬಳಗದ ಯುವ ಮಿತ್ರರು ಉಪಸ್ಥಿತರಿದ್ದರು.
ಇದೇ ವೇಳೆ ಕರೋನ ವಾರಿಯರ್ಸ್ ಕಾರ್ಯವನ್ನು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ನಿಮ್ಮೊಂದಿಗೆ ನಾವಿ ದ್ದೇವೆ ಎಂಬ ಮಾತನ್ನು ಹೇಳಿದರು