ಧಾರವಾಡ –
ನ್ಯಾಯವಾದಿ ವಿನೋದ ಪಾಟೀಲ್ ರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಿರುವ ಹುಬ್ಬಳ್ಳಿಯ ನವನಗರ ಪೊಲೀಸರ ವಿರುದ್ದ ಹಿರಿಯ ನ್ಯಾಯವಾದಿ ಪಿ ಎಚ್ ನೀರಲಕೇರಿ ಕಿಡಿಕಾರಿದ್ದಾರೆ.
ನವನಗರ ಪೋಲಿಸ್ ಠಾಣೆಯ ಪೋಲಿಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಸುಪ್ರೀಮ್ ಕೋರ್ಟ ತೀರ್ಪು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ, ಅವರನ್ನು ಬಂಧಿಸಿ ಸಾರ್ವಜನಿಕ ಸ್ಥಳದಲ್ಲಿ ಬೇಡಿ ಹಾಕಿಕೊಂಡು ನಡೆಸಿಕೊಂಡು ಬಂದಿದ್ದು ವಕೀಲರ ಸಮುದಾಯದ ಮೇಲೆ ನಡೆದ ದಾಳಿಯಾಗಿದೆ ಎಂದರು.
ಈ ಘಟನೆ ಕುರಿತು ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ವಕೀಲರು ಪ್ರತಿಭಟನೆ ನಡೆಸಿ ಘಟನೆಗೆ ಕಾರಣರಾದ ಹುಬ್ಬಳ್ಳಿ ನಗರದ ನವನಗರ ಪೋಲಿಸ್ ಠಾಣೆಯ ಸಿಪಿಐ ಪ್ರಭು ಸೂರಿನ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದರು ಆದರೂ ಇದುವರೆಗೂ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳು ಸದರ ಸಿಪಿಐ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸದಿರುವುದು ಖಂಡನೀಯ ಎಂದರು.ಇನ್ನೂ ವಕೀಲರು ನ್ಯಾಯಾಂಗದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕ್ಷುಲ್ಲಕ ಕಾರಣಕ್ಕಾಗಿ ಸದರಿ ವಕೀಲರನ್ನು ಅವರ ಮನೆ ಹುಡುಕಿಕೊಂಡು ಹೋಗಿ ಬಂಧನ ಮಾಡಿ ಕೈಗೆ ಕೋಳ ತೋಡಿಸಿ ಸಾರ್ವಜನಿಕವಾಗಿ ನಡೆಸಿಕೊಂಡು ಹೋಗಿರುವ ಘಟನೆ ಅಮಾನವೀಯವಾದದು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಇಷ್ಟಾದರೂ ಕೂಡಾ ಸದರಿ ಪೋಲಿಸ್ ಅಧಿಕಾರಿಯನ್ನು ಅಮಾನತ್ತು ಮಾಡದಿರುವುದು ಪೋಲಿಸ್ ಆಡಳಿತದ ವೈಖರಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಹೀಗಾಗಿ ಈ ಕೂಡಲೇ ಸದರ ಪೋಲಿಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಿ ಎಚ್ ನಿರಲಕೇರಿ ಯವರು ಒತ್ತಾಯಿಸಿದ್ರು. ಇನ್ನೂ ಹಿರಿಯ ಪೋಲಿಸ್ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೋಲಿಸರು ವಕೀಲರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವಂತೆ ಪೋಲಿಸರಿಗೆ ಅಗತ್ಯ ತಿಳುವಳಿಕೆ ಮತ್ತು ಮಾಹಿತಿಯನ್ನು ನೀಡಬೇಕು.ಒಂದು ವೇಳೆ ಸದರಿ ಘಟನೆಗೆ ಕಾರಣರಾದ ಪೋಲಿಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದಲ್ಲಿ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ಹೋರಾಟವನ್ನು ನಡೆಸಬೇಕಾಗುತ್ತದೆ. ಇದು ಕರ್ನಾಟಕ ವಕೀಲರ ಪರಿಷತ್ತಿನ ಅದ್ಧ್ಯಕ್ಷರು ಸರಿಯಾಗಿ ಹೇಳಿದ್ದಾರೆ.ಈ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ತುರ್ತಾಗಿ ಕ್ರಮ ಜರುಗಿಸಿ ಇಲಾಖೆ ಮತ್ತು ನ್ಯಾಯವಾದಿಗಳ ಒಳ್ಳೇಯ ರೀತಿಯಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಪಿ ಎಚ್ ನಿರಲಕೇರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ರು.