ಧಾರವಾಡ –
ಕೇಂದ್ರ ಸರ್ಕಾರ ಇದೊಂದು ಶಂಡ ಸರ್ಕಾರ ಹೀಗೆಂದು ಕೇಂದ್ರದ ಮಾಜಿ ಸಚಿವ ಬಾಬುಗೌಡ ಪಾಟೀಲ್ ಹೇಳಿದರು. ಧಾರವಾಡದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ರೈತರ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ ನಿಷ್ಕಾಳಜಿ ತೋರುತ್ತಿದೆ ಚಳುವಳಿ ಏಕೆ ಮಾಡುತ್ತಿದ್ದಿರಿ ಎಂದು ಕೇಳುವಷ್ಟು ಸೌಜನ್ಯ ಸಹ ಸರ್ಕಾರಕ್ಕೆ ಇಲ್ಲ.

ಮಸೂದೆ ಹಿಂಪಡೆಯುವಂತೆ ರೈತರು ಕೇಳುತ್ತಿದ್ದರೆ .ರೈತರನ್ನು ಮಾತುಕತೆಗೆ ಕರೆಸಿದ್ದು ನಾವು ಮಾಡಿದ ಕಾನೂನು ಮಾಡಿದ್ದು ಸರಿ ಇದೆ. ಅದರ ಬಗ್ಗೆ ತಮಗೆ ತಿಳುವಳಿಕೆ ನೀಡುತ್ತೆವೆ ಎನ್ನುತ್ತಿದ್ದಾರೆ.ಪ್ರಧಾನಿ ಅವರು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದಾರೆ ಎಂದರು.

ಎಪಿಎಂಸಿ ಕಾಯ್ದೆ ಜಾರಿ ವಿಚಾರ ಕುರಿತು ಮಾತನಾಡಿ ಪ್ರಧಾನಿ ಮೋದಿ ಒಕ್ಕಲುತನ ಮಾಡಿಲ್ಲ, ಅವರಿಗೆ ಕೃಷಿ ಬಗ್ಗೆ ಅನುಭವ ಇಲ್ಲ.ನಿಮ್ಮ ಒಳಗುಟ್ಟು ನಮಗೆ ಅರ್ಥವಾಗಿದೆ.ಸರ್ಕಾರವನ್ನು ಖರೀದಿಸುವಂತ ಶ್ರೀಮಂತರಿದ್ದಾರೆ.ಈ ಸರ್ಕಾರ ಈಸ್ಟ್ ಇಂಡಿಯಾ ಕಂಪನಿಯ ಅಪ್ಪ ಇದು ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಡಲು ಮುಂದಾಗಿದ್ದಾರೆ. ಬೇಕಾದಷ್ಟು ಜಮೀನು ಖರೀದಿಸಬಹುದು ಸರ್ಕಾರ ಬೇಕಾದಷ್ಟು ಜಮೀನನ್ನು ಕೈಗಾರಿಕೆಗಳಿಗೆ ಕೊಟ್ಟಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಜಮೀನು ಕೊಟ್ಟು ರೈತರು ಆಳಾಗಿ ದುಡಿಯುವಂತೆ ಮಾಡಿದ್ದಾರೆ ಎಂದರು. ಇನ್ನೂ ಭಾರತ ಸರ್ಕಾರ ಶಂಡ ಸರ್ಕಾರವೇ ಎಂದರು.ಪ್ರತಿಭಟನೆಯಲ್ಲಿ ಟೆರರಿಸ್ಟ್ ಇದ್ದಾರೆ ಎಂದು ಹೇಳುತ್ತಿದ್ದಾರೆ .
ನಿಮಕೆ ತಾಕತ್ತಿದ್ದರೆ ಅಂತವರನ್ನು ಬಂಧಿಸಿ.ಇದನ್ನು ಬಿಟ್ಟು ಸುಮ್ಮನೆ ಮಾತನಾಡಬೇಡಿ.ದೇಶದ ಜನರ ರಕ್ತದಲ್ಲಿ ಧಾರ್ಮಿಕ ಭಾವನೆ ತುಂಬಿದ್ದಾರೆ. ದೇವರನ್ನು ರಾಜಕೀಯಕ್ಕೆ ತಂದಿದ್ದಾರೆ.ಡಿ.3 ರವರಗೆ ಕಾದುನೋಡುತ್ತೆವೆ ನಮ್ಮ ರೈತರ ಬೇಡಿಕೆ ಈಡೇರದೆ ಹೋದಲ್ಲಿ ಸಿಗದೇ ಡಿ.3 ರಂದು ಧಾರವಾಡದ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೆವೆ ಎಂದರು.