ಕಾರ್ಯಕರ್ತರ ಪ್ರೀತಿ ಹಾಗೂ ಗೌರವದ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಕಾರ್ಯಕ್ರಮ ಗಳಿಗೆ ಬಂದು ಭಾಷಣ ಬೀಗಿದು ಹಾರ ತುರಾಯಿ ಹಾಕಿಸಿಕೊಳ್ಳುವ ಸಂಸ್ಕ್ರತಿಯ ನಡುವೆ ಮಾದರಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Suddi Sante Desk
ಕಾರ್ಯಕರ್ತರ ಪ್ರೀತಿ ಹಾಗೂ ಗೌರವದ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ –  ಕಾರ್ಯಕ್ರಮ ಗಳಿಗೆ ಬಂದು ಭಾಷಣ ಬೀಗಿದು ಹಾರ ತುರಾಯಿ ಹಾಕಿಸಿಕೊಳ್ಳುವ ಸಂಸ್ಕ್ರತಿಯ ನಡುವೆ ಮಾದರಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ

ಕಾರ್ಯಕರ್ತರು ಪ್ರೀತಿ ಹಾಗೂ‌ ಗೌರವದಿಂದ ಕೈಗೊಳ್ಳುವ ಕಾರ್ಯಗಳು ಎಂದಿಗೂ ವಿಶೇಷ ಹಾಗೂ ವಿಶಿಷ್ಟ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಕಾರ್ಯಕರ್ತರು ಹಾಗೂ ನವಯುಗ ಸಂಘಟನೆಯು ಹಮ್ಮಿಕೊಂಡ ನೂರು ಜೋಡಿಗಳಿಗೆ ಸಾಮೂಹಿಕ ವಿವಾಹ ಹಾಗೂ ನೂರು ವಟುಗಳ ಉಪನಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

ಮೂರು ಸಾವಿರ ಮಠದ ಶ್ರೀ ಶ್ರೀ ಗುರುಸಿದ್ದರಾಜ ಯೋಗೇಂದ್ರ ಮಹಾಸ್ವಾಮಿಗಳು ಹಾಗೂ ರುದ್ರಾಕ್ಷಿಯ ಮಠದ ಶ್ರೀ ಶ್ರೀ ಬಸವಲಿಂಗ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ  ನವ ದಂಪತಿಗಳಿಗೆ ಹಾಗೂ ಬ್ರಹ್ಮಚರ್ಯಕ್ಕೆ ಕಾಲಿಡುತ್ತಿರುವ ಬ್ರಹ್ಮಚಾರಿ ಗಳಿಗೆ ಶುಭ ಕೋರಿ,ಆಶೀರ್ವದಿಸಲಾಯಿತು.

 

ಕಾರ್ಯಕ್ರಮದಲ್ಲಿ  ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ , ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ನವಯುಗ ಸಂಘಟನೆ ಹುಬ್ಬಳ್ಳಿ ವತಿಯಿಂದ  ಶ್ರೀಕೃಷ್ಣ ಗಾಡಗಳೇಕರ ನೇತ್ರತ್ವದಲ್ಲಿ ೪೪ ಜೋಡಿ ಗಳಿಗೆ ಸಾಮೂಹಿಕ ವಿವಾಹ ಹಾಗೂ ೬ ವಟುಗಳ ಉಪನಯನ ನಡೆಯಿತು.

ಮೂರು ಸಾವಿರ ಮಠದ ಶ್ರೀ ಶ್ರೀ ಗುರುಸಿದ್ದರಾಜ ಯೋಗೇಂದ್ರ ಮಹಾಸ್ವಾಮಿಗಳು ಹಾಗೂ ರುದ್ರಾಕ್ಷಿಯ ಮಠದ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ನವ ದಂಪತಿಗಳಿಗೆ ಹಾಗೂ ಬ್ರಹ್ಮಚರ್ಯಕ್ಕೆ ಕಾಲಿಡುತ್ತಿರುವ ಬ್ರಹ್ಮಚಾರಿಗ ಳಿಗೆ ಶುಭ ಕೋರಿ ಆಶೀರ್ವದಿಸಲಾಯಿತು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.