ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಸಾವು – ಕೀರ್ತನ್ ನಿಧನಕ್ಕೆ ಸಂತಾಪ

Suddi Sante Desk
ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಸಾವು – ಕೀರ್ತನ್ ನಿಧನಕ್ಕೆ ಸಂತಾಪ

ಕೊಡಗು

ಹೃದಯಾಘಾತದಿಂದ 6 ನೇ ತರಗತಿಯ ವಿದ್ಯಾರ್ಥಿ ಯೊರ್ವ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.ಕೀರ್ತನ್  (12) ಮೃತಪಟ್ಟ ವಿದ್ಯಾರ್ಥಿ ಯಾಗಿದ್ದಾನೆ.ಕುಶಾಲ ನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿ ಕೀರ್ತನ್ ಮರಣವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಮಲಗಿದ ಜಾಗದಿಂದ ಕೀರ್ತನ್ ಎರಡು ಬಾರಿ ಕಿರುಚಿಕೊಂಡಿದ್ದು ಪೋಷಕರು ಕುಶಾಲನಗರ ಆಸ್ಪತ್ರೆ ಕರೆದೊಯ್ಯುವ ವೇಳೆಗೆ ಬಾಲಕ ಮೃತಪ ಟ್ಟಿದ್ದಾನೆ.ಈತ ಓದುತ್ತಿದ್ದ ಅದೇ ಶಾಲೆಯ ಬಸ್ ಚಾಲಕನಾಗಿ ಬಾಲಕನ ತಂದೆ ಕರ್ತವ್ಯ ನಿರ್ವಹಿ ಸುತ್ತಿದ್ದರು.

ಸುದ್ದಿ ಸಂತೆ ನ್ಯೂಸ್ ಕೊಡಗು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.