ಧಾರವಾಡ –
ಧಾರವಾಡದ ಪ್ರತಿಷ್ಠಿತ ಎಸ್ ಡಿಎಮ್ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಪ್ರವೇಶಾತಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕ ಮಾಡದಂತೆ ಎಸ್ ಡಿಎಮ್ ಶಿಕ್ಷಣ ಸಂಸ್ಥೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಡಿದೆ. ಯಾವುದೇ ಕಾರಣಕ್ಕೂ ಯಾರನ್ನು ಸಂಪರ್ಕ ಮಾಡಬೇಡಿ ಎಂದು ಕುಲಸಚಿವರಾದ ಪ್ರೋ ಲೆ. ಕ. ದಿನೇಶ್ ಕರ್ನಲ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಈ ಒಂದು ಮಾಹಿತಿಯ ಸಂದೇಶವನ್ನು ರವಾನಿಸಿದ್ದಾರೆ. ಎಸ್ಡಿಎಂ ವಿಶ್ವವಿದ್ಯಾಲಯದ ಅಧೀನದ ಶಿಕ್ಷಣ ಸಂಸ್ಥೆಗಳಾದ ವೈಧ್ಯಕೀಯ, ದಂತ ವೈಧ್ಯಕೀಯ, ಫಿಜಿಯೋಥೇರಪಿ , ನರ್ಸಿಂಗ್ ,ಬಿ ಫಾರ್ಮ್ ಹೀಗೆ ಎಸ್ ಡಿಎಮ್ ನ ಐದು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಪ್ರವೇಶಾತಿಗಾಗಿ ಐದು ಅಂಗ ಸಂಸ್ಥೆಗಳಿಗೆ ಪ್ರವೇಶಾತಿ ಪ್ರಕ್ರಿಯೆಗಳಿಗೆ ಯಾರನ್ನು ಮಧ್ಯವರ್ತಿಗಳೆಂದು ಸಂಪರ್ಕ ಮಾಡಬೇಡಿ ಎಂದಿದ್ದಾರೆ.

ಇಲ್ಲಿನ ವಿಶ್ವವಿದ್ಯಾಲಯದ ಮುಖ್ಯ ಕಚೇರಿಯಲ್ಲಿ ಸಂಪರ್ಕ ಮಾಡಿ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಸೂಚನೆ ನೀಡಿದ್ದಾರೆ. ಇನ್ನೂ ಯಾವುದೇ ಪ್ರವೇಶ ಮಾಹಿತಿ ಬಯಸುವವರು ಮಧ್ಯವರ್ತಿಗಳ ಮೊರೆ ಹೋಗದೆ, ನೇರವಾಗಿ ಕಚೇರಿ ಸಂಪರ್ಕಿಸಬೇಕು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಲ್ಲವೇ ಈ ದೂರವಾಣಿ ಸಂಖ್ಯೆಗಳಿಗಾದರೂ ಸಂಪರ್ಕ ಮಾಡಿ ಎಂದಿದ್ದಾರೆ. 0836–2477777/ 7676250920 .