ಹುಬ್ಬಳ್ಳಿ –
ಹೌದು ಸಾಮಾನ್ಯವಾಗಿ ಯಾರಿಗಾದರೂ ಪರ್ಸ್ ಸಿಕ್ಕಿತೆಂದರೆ ಮರಳಿ ಕೊಡೊದು ತುಂಬಾ ಅಪರೂಪ. ಪರಸ ಮೊದಲು ಕೈಗೆ ಸಿಗುತ್ತಿದ್ದಂತೆ ಮೊದಲು ಅದನ್ನು ತಗೆದು ನೋಡಿ ಅದರಲ್ಲಿ ಏನೇನಿದೆ ಅಂತಾ ಒಮ್ಮೇ ನೋಡಿ ಹಣ ಇದ್ದರೆ ಅದನ್ನು ತಗೆದುಕೊಂಡು ಮರಳಿ ಎಲ್ಲಿಯಾದರೂ ಬಿಸಾಕಿ ಹೋಗುತ್ತೆವೆ. ಇನ್ನೂ ಅದರಲ್ಲಿ ಹಣವಿಲ್ಲವೆಂದರಂತೂ ಸಿಕ್ಕ ಪರ್ಸನ್ನು ಸಿಕ್ಕ ಜಾಗದಲ್ಲಿಯೇ ಇಟ್ಟು ಹೋಗುತ್ತವೆ. ಇದು ಸರ್ವೆ ಸಾಮಾನ್ಯವಾದರೆ ಇನ್ನೂ ಕೆಲವರಂತೂ ಸಿಕ್ಕ ಪರ್ಸನ್ನು ಹೇಗಾದರೂ ಮಾಡಿ ಕಳೆದುಕೊಂಡರ ಕೈಗೆ ತಲುಪಿಸೊದೇ ದೊಡ್ಡ ಕೆಲಸ .ಈ ಮಾತಿಗೆ ರಡ್ಡೇರ ಸಹೋದರರೇ ಸಾಕ್ಷಿ. ಆರ್ ಬಿ ರಡ್ಡೇರ್ , ಎಸ್ ಬಿ ರಡ್ಡೇರ್ ಇಬ್ಬರು ಸಹೋದರರು. ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮದವರು.
ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ಅಜ್ಜನ ದೇವಸ್ಥಾನಕ್ಕೇ ಹೋಗಿದ್ದಾರೆ, ದರ್ಶನ ಮಾಡಿಕೊಂಡು ಇನ್ನೇನು ಅಲ್ಲಿಂದ ಹೊಗಬೇಕು ಎನ್ನುವಷ್ಟರಲ್ಲಿ ಕಣ್ಣಿಗೆ ಒಂದು ಪರ್ಸ್ ಸಿಕ್ಕಿದೆ.ತಗೆದು ನೋಡಿದ್ರೆ ಅದರಲ್ಲಿ 15 ಸಾವಿರ ರೂಪಾಯಿ ಹಾಗೇ Psi ಗುರಿತಿನ ಚೀಟಿ ಇನ್ನಿತರ ಕೆಲ ದಾಖಲೆಗಳು ಇದ್ದವು. ಇದನ್ನು ಕೈಗೆ ತಗೆದುಕೊಂಡು ಸಿದ್ದಾರೂಢ ದೇವಸ್ಥಾನದಲ್ಲಿಯೇ ನಿಂತುಕೊಂಡು ಪಿಎಸೈ ಅವರ ನಂಬರ್ ತಗೆದುಕೊಳ್ಳಲು ಅವರನ್ನು ಸಂಪರ್ಕ ಮಾಡಲು ರಡ್ಡೇರ ಸಹೋದರರು ಹರಸಾಹಸ ಮಾಡಿದ್ದಾರೆ.ಕೊನೆಗೆ ಬೆಳಗಾವಿಯ ಕಂಟ್ರೋಲ್ ರೂಮ್ ಗೆ ಪೊನ್ ಮಾಡಿ Psi ಉಡಪ್ಪ ಕಟ್ಟೆಕಾರ ಅವರ ನಂಬರ್ ಬೇಕಾಗಿದೆ ಅವರ ಪರ್ಸ ನಮಗೆ ಸಿಕ್ಕಿದೆ ಎಂದು ಹೇಳಿದಾಗ ಕಂಟ್ರೋಲ್ ರೂಮ್ ಸಿಬ್ಬಂದಿಯವರು ಅವರ ನಂಬರ್ ಕೊಟ್ಟಿದ್ದಾರೆ. ಉಡವಪ್ಪ ಕಟ್ಟೇಕಾರ 2010 ನೇ ಬ್ಯಾಚ್ ಪಿಎಸೈ ಆಗಿರುವ ಇವರು ಸಧ್ಯ ಬೆಳಗಾವಿಯ ಎಸ್ಪಿ ಕಚೇರಿಯಲ್ಲಿ ಪಿಎಸೈ ಆಗಿ ಕರ್ತವ್ಯ ಮಾಡುತ್ತಿದ್ದಾರೆ.
ಬೆಳಗಾವಿಯಿಂದ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೇ ಬಂದು ಅಜ್ಜನ ದರ್ಶನ ಮಾಡಿಕೊಂಡು ಮರಳಿ ಹೋಗುವಾಗ ಕುಳಿತುಕೊಂಡ ಜಾಗದಲ್ಲಿಯೇ ಪರ್ಸ್ ಬಿದ್ದಿದೆ. ಹುಡುಕಾಡಿದರೂ ಸಿಗದ ಹಿನ್ನಲೆಯಲ್ಲಿ ಎಲ್ಲಾ ದಾಖಲೆಗಳಿದ್ದು ಅದರಲ್ಲಿ 15 ಸಾವಿರ ಹಣ .ಇನ್ನೂ ಮರಳಿ ಹೊಗಬೇಕು ಎಂದರೆ ಹಣವೂ ಇಲ್ಲ.ಆದ್ರೂ ಸ್ನೇಹಿತರ ಬಳಿ ಸಹಾಯ ಪಡೆದುಕೊಂಡು ಬೆಳಗಾವಿಗೆ ಹೊರಟಿದ್ದರು. ದಾರಿ ಮಧ್ಯದಲ್ಲಿಯೇ ಪರ್ಸ್ ಕಳೆದುಕೊಂಡ ಚಿಂತೆಯಲ್ಲಿಯೇ ಹೊರಟಿದ್ದ ಇವರಿಗೆ ರಡ್ಡೇರ್ ಸಹೋದರರು ಅವರಿಗೆ ಪೊನ್ ಮಾಡಿದ್ದಾರೆ. ಪೊನ್ ನಲ್ಲಿ ಪರ್ಸ್ ಸಿಕ್ಕಿರುವ ಸುದ್ದಿ ಕೇಳುತ್ತಿದ್ದಂತೆ ಸಂತೋಷಗೊಂಡ ಪಿಎಸೈ ಸಾಹೇಬ್ರು ಪರ್ಸ್ ಇರಲಿ ನಿಮ್ಮನ್ನು ನೋಡಲು ನಾನು ಬರತೇನಿ ಎಂದುಕೊಂಡು ಬೆಳಗಾವಿಯಿಂದ ಮರಳಿ ಸಿದ್ದಾರೂಢ ಮಠಕ್ಕೇ ಬಂದಿದ್ದಾರೆ.
ಮಠಕ್ಕೇ ಬರುತ್ತಿದ್ದಂತೆ ಖುಷಿಯಾಗಿ ಇಬ್ಬರು ಸಹೋದರರನ್ನು ತಬ್ಬಿಕೊಂಡು ಧನ್ಯವಾದಗಳನ್ನು ಹೇಳಿದ್ದಾರೆ.ಅರ್ಧ ಕಪ್ ಟೀ ಕುಡಿಸಿ ಮತ್ತೊಮ್ಮೆ ಸಿದ್ದಾರೂಢ ಅಜ್ಜ ನಿಮಗೆ ಒಳ್ಳೇಯದನ್ನು ಮಾಡಲಿ ಎಂದು ಹೇಳಿ ಪರಿಚಯ ಮಾಡಿಕೊಂಡು ಅಜ್ಜನ ಸನ್ನಿಧಿಯಲ್ಲೇ ಕಳೆದುಕೊಂಡಿದ್ದ ತಮ್ಮ ಪರ್ಸನ್ನು ಮರಳಿ ಅಲ್ಲೇ ತಗೆದುಕೊಂಡು ಹೋಗಿದ್ದಾರೆ.ಇನ್ನೂ ಇತ್ತ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ರಡ್ಡೇರ ಸಹೋದರರ ಮಾನವೀಯತೆಯ ಗುಣವನ್ನು ಮೆಚ್ಚಲೇಬೇಕು,,