ಹುಬ್ಬಳ್ಳಿ –
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿನಿ ಯೋಜನೆಯಡಿ ಸನ್ 2020-21 ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸ್ವಂತ ಉದ್ಯೋಗ ಮಾಡಲು ಸಹಾಯಧನದ ಚೆಕ್ ನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ವಿತರಣೆ ಮಾಡಿದರು

ಹುಬ್ಬಳ್ಳಿಯ ಗೃಹ ಕಚೇರಿಯಲ್ಲಿ ಕ್ಷೇತ್ರದ ಫಲಾನುಭ ವಿಗಳಿಗೆ ಪರಿಹಾರದ ಚೆಕ್ ನ್ನು ವಿತರಿಸಲಾಯಿತು

ಬೇರೆ ಬೇರೆ ಸಮುದಾಯದ ಮೂವರು ಫಲಾನುಭ ವಿಗಳಿಗೆ ಚೆಕ್ ಹತ್ತಾಂತರವನ್ನು ಮಾಡಲಾಯಿತು

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶಿವಣ್ಣ ಬಡವಣ್ಣನವರ,ಮುಕ್ತಂಹುಸೇನ ಲಷ್ಕರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.