ಧಾರವಾಡ –
ಜಿ.ಪಂ. ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ಬಂಧನ ಅವಧಿ ಮುಗಿದ ಹಿನ್ನಲೆಯಲ್ಲಿ ಇಂದು ಧಾರವಾಡದ ಸಿಬಿಐ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಮಧ್ಯಾಹ್ನದ ಬಳಿಕ ವೀಡಿಯೋ ಕಾನ್ಪರೆನ್ಸ್ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ನ್ಯಾಯಾಧೀಶರು ವಿಚಾರಣೆ ಮಾಡಲಿದ್ದಾರೆ.
ಈಗಾಗಲೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರೋ ವಿನಯ ಕುಲಕರ್ಣಿ ಬಂಧನ ಅವಧಿ ಇಂದು ಮುಕ್ತಾಯವಾಗಲಿದೆ. ಹೀಗಾಗಿ ಮಧ್ಯಾಹ್ನದ ನಂತರ ನ್ಯಾಯಾಧೀಶರು ವಿಡಿಯೋ ಕಾನ್ಸರನ್ಸ್ ಮೂಲಕ ವಿಚಾರಣೆ ಮಾಡಲಿದ್ದಾರೆ. ಈ ನಡುವೆ ಬಹುತೇಕ ನ್ಯಾಯಾಂಗ ಬಂಧನ ಅವಧಿ ಮುಂದುವರೆಯಲಿದ್ದು ಸಿಬಿಐ ಅಧಿಕಾರಿಗಳು ಮತ್ತೇ ಇವರನ್ನು ವಿಚಾರಣೆಗೆ ಕೇಳಿದ್ರೆ ನ್ಯಾಯಾಧೀಶರು ಸಿಬಿಐ ಕಸ್ಟಡಿಗೆ ನೀಡಲಿದ್ದು ಕೇಳದಿದ್ದರೇ ಮತ್ತೇ ನ್ಯಾಯಾಂಗ ಬಂಧನದ ಅವಧಿ ಮುಂದುವರಿಯಲಿದೆ.ಇನ್ನೂ ಜಾಮೀನಿಗಾಗಿ ಈಗಾಗಲೇ ಅರ್ಜಿಯನ್ನು ಹಾಕಿದ್ದು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 9 ಕ್ಕೇ ಮುಂದೂಡಲಾಗಿದೆ.ಇದರೊಂದಿಗೆ ಇದೇ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ,ಸೋದರ ಮಾವ ಸೋಮಶೇಖರ ಇಂಡಿ, ಹಾಗೇ ಸಚಿವರಾಗಿದ್ದ ಸಮಯದಲ್ಲಿ ಆಪ್ತರಾಗಿದ್ದ ಸೋಮು ನ್ಯಾಮಗೌಡ ಇವರಿಗೆ ಸಿಬಿಐ ಅಧಿಕಾರಿಗಳು ಸುಳ್ಳು ಪತ್ತೆ ಪರೀಕ್ಷೆ ಮಾಡಲು ಅನುಮತಿ ಕೇಳಿದ್ದು ಅದರ ವಿಚಾರಣೆ ಕೂಡಾ ಇಂದೇ ಬರಲಿದೆ.
ಈಗಾಗಲೇ ಈ ಒಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಮಾಡಿದ್ದು ಇಂದಿಗೆ ಮುಂದೂಡಿದ್ದು ಎರಡು ಪ್ರಕರಣಗಳ ತೀರ್ಪು ಏನಾಗಲಿದೆ ಎಂಬದರ ಮೇಲೆ ಎಲ್ಲರ ಚಿತ್ತ ಇದೆ.