ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ BJP – ಶಿಗ್ಗಾಂವಿ ಭರತ್ ಬೊಮ್ಮಾಯಿ,ಸೊಂಡೂರ ಬಂಗಾರು ಹನುಮಂತು ಅಖಾಡಕ್ಕೆ…..

Suddi Sante Desk
ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ BJP – ಶಿಗ್ಗಾಂವಿ ಭರತ್ ಬೊಮ್ಮಾಯಿ,ಸೊಂಡೂರ ಬಂಗಾರು ಹನುಮಂತು ಅಖಾಡಕ್ಕೆ…..

ಬೆಂಗಳೂರು

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಘೋಷಣೆ ಮಾಡಿದೆ ಹೌದು ಸದ್ಯ ಎರಡು ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ

ಇನ್ನೂ ಅತ್ತ ಸಂಡೂರಿನಲ್ಲಿ ಜನಾರ್ಧನ ರೆಡ್ಡಿ ಆಪ್ತ ಬಂಗಾರು ಹನುಮಂತು ಅವರಿಗೆ ಟಿಕೆಟ್​ ನೀಡ ಲಾಗಿದೆ  ಉಳಿದಂತೆ ಚನ್ನಪಟ್ಟಣಕ್ಕೆ ಯಾರು ಅಭ್ಯರ್ಥಿ ಎಂಬುವುದು ಬಿಜೆಪಿ-ಜೆಡಿಎಸ್​ ನಾಯಕರು ಸದ್ಯ ನಿಗೂಢವಾಗಿ ಇರಿಸಿದ್ದಾರೆ. ಶಿಗ್ಗಾಂವಿಗೆ ತಮ್ಮ ಪುತ್ರನಿಗೆ ಟಿಕೆಟ್​ ಕೊಡಿಸುವಲ್ಲಿ ಬೊಮ್ಮಾಯಿ ಅವರು ಸಕ್ಸಸ್ ಆಗಿದ್ದಾರೆ.ಅತ್ತ ತಮ್ಮ ಆಪ್ತ ದಿವಾಕರ್ ಅವರಿಗೆ ಟಿಕೆಟ್​ ಕೊಡಿಸಲು ಹರಸಾಹಸ ಪಡುತ್ತಿದ್ದ ಮಾಜಿ ಸಚಿವ ಬಿ.ಶ್ರೀ​ರಾಮುಲು ಅವರ ಪ್ರಯತ್ನ ವಿಫಲವಾದಂತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.