ಧಾರವಾಡ –
ಕಸ ಹಾಕಿದವರಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು – ಗೊತ್ತಿಲ್ಲದಂತೆ ಕಸ ಹಾಕಿದವರನ್ನು ಪತ್ತೆ ಮಾಡಿ ದಂಡ ಹಾಕಿದ ಸಿದ್ದಾರ್ಥ ನಿಡೋಣಿ ಮತ್ತು ಟೀಮ್…..
ಎಲ್ಲೇಂದರಲ್ಲಿ ಕಸ ಹಾಕುತ್ತಿರುವವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಬಿಸಿಯನ್ನು ಮುಟ್ಟಿಸು ತ್ತಿದ್ದಾರೆ.ಹೌದು ಈ ಒಂದು ವಿಚಾರ ಕುರಿತಂತೆ ಎಲ್ಲೇಂದರಲ್ಲಿ ಕಸವನ್ನು ಹಾಕಬೇಡಿ ಎಂದು ಎಷ್ಟೇ ಹೇಳಿದ್ರು ಜಾಗೃತಿ ಮೂಡಿ ಸಿದರು ಕೂಡಾ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯ ಪಕ್ಕ ದಲ್ಲಿಯೇ ಕಸವನ್ನು ಹಾಕಿದವರಿಗೆ ಪಾಲಿಕೆಯ ಅಧಿಕಾರಿಗಳು ಬಿಸಿಯನ್ನು ಮುಟ್ಟಿಸಿದ್ದಾರೆ
ಧಾರವಾಡದ ವಲಯ ಕಚೇರಿ 12ರ ವ್ಯಾಪ್ತಿಗೆ ಬರುವ ಪಿ.ಬಿ. ರಸ್ತೆಯ ಕೆಎಂಎಫ್ ಸಮೀಪ ಸಾರ್ವಜನಿಕ ರಸ್ತೆಯಲ್ಲೇ ಅಕ್ರಮ ವಾಗಿ ಕಟ್ಟಡ ತ್ಯಾಜ್ಯವನ್ನು ಸುರಿಯುತ್ತಿದ್ದವರನ್ನು ಪತ್ತೆಹಚ್ಚಿದ್ದಾರೆ ಪಾಲಿಕೆಯ ಅಧಿಕಾರಿಗಳು ಅಲ್ಲದೇ ಸ್ಥಳದಲ್ಲೇ ರೂ. 5,000 ದಂಡವನ್ನು ವಿಧಿಸಿ ಎಚ್ಚರಿಕೆಯನ್ನು ನೀಡಿದ್ದಾರೆ.ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿಯವರ ನೇತ್ರತ್ವದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಸಿದ್ದಾರ್ಥ್ ನಿಡೋಣಿ, ಹಾಗೂ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಪೂಜಾ ಇಚ್ಚಂಗಿ ಮತ್ತು ಶ್ರೀಮತಿ ನೀಲಮ್ಮ ಅಂಗಡಿ ಅವರ ನೇತೃತ್ವದ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಲಾಗಿದೆ.ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಕಸ ಅಥವಾ ಕಟ್ಟಡ ತ್ಯಾಜ್ಯಗಳನ್ನು ಸುರಿ ಯುವುದು ದಂಡನೀಯ ಅಪರಾಧವಾಗಿದ್ದು
ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಪಾಲಿಕೆ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಇನ್ನೂ ಸುಂದರ ಹುಬ್ಬಳ್ಳಿ-ಧಾರವಾಡ ನಿರ್ಮಾಣಕ್ಕೆ ಪಾಲಿಕೆಯೊಂದಿಗೆ ಕೈಜೋಡಿಸಿ, ನಗರದ ಸ್ವಚ್ಛತೆ ಕಾಪಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.
ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..



