ಸರ್ಕಾರಿ ನೌಕರರ ಸಂಘದ ಚುನಾವಣೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ – ಆರಂಭಗೊಂಡ ಚುನಾವಣಾ ಪ್ರಕ್ರಿಯೆ…..

Suddi Sante Desk
ಸರ್ಕಾರಿ ನೌಕರರ ಸಂಘದ ಚುನಾವಣೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ – ಆರಂಭಗೊಂಡ ಚುನಾವಣಾ ಪ್ರಕ್ರಿಯೆ…..

ಬೆಂಗಳೂರು

ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭ ವಾಗಿದ್ದು ನಾಳೆ ಯಿಂದ ನಾಮಪತ್ರ ಸಲ್ಲಿಕೆ ನಡೆಯಲಿದೆ ರಾಜ್ಯ ಸರ್ಕಾರಿ ನೌಕರರ ಸಂಘದ ಐದು ವರ್ಷ ಅವಧಿಗಾಗಿ ಚುನಾವಣೆ ಅ. 28ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ’

ಅ.9ರಿಂದ ಅ. 18ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 19 ರಂದು ನಾಮಪತ್ರ ಪರಿಶೀಲನೆ, 21 ರಂದು ಸಂಜೆ 5.30 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸ ಲಾಗಿದೆ. ಚುನಾವಣೆಯ ಮತದಾನ ಸೇರಿದಂತೆ ಎಲ್ಲಾ ಮತದಾನ ಪ್ರಕ್ರಿಯೆಗಳು ನಡೆಯಲಿವೆ

‘ಚುನಾವಣೆಗೆ ಸ್ಪರ್ಧಿಸುವವರು ₹ 2ಸಾವಿರ ಠೇವಣಿ ಯನ್ನು ಚುನಾವಣಾಧಿಕಾರಿ ಕಚೇರಿಗೆ ಪಾವತಿಸಿ ರಸೀದಿ ಪಡೆಯಬೇಕು. 5 ವರ್ಷ ಸದಸ್ಯತ್ವ ಹೊಂದಿರುವ ನೌಕರರು ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ನಾಮ ಪತ್ರಕ್ಕೆ 5 ವರ್ಷದ ಸದಸ್ಯತ್ವ ಇರುವ ಸದಸ್ಯರಲ್ಲಿ ಒಬ್ಬರು ಸೂಚಕರಾಗಿ ಮತ್ತೊಬ್ಬರು ಅನುಮೋದಕ ರಾಗಿ ಒಬ್ಬ ಅಭ್ಯರ್ಥಿಗೆ ಮಾತ್ರ ಸಹಿ ಹಾಕಬೇಕು.

ಸೂಚಕರಾಗಿ, ಅನುಮೋದಕರಾಗಿ, ಸಹಿ ಹಾಕಿದವರು ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆಯಾ ಇಲಾಖೆಯ ಸದಸ್ಯರು ತಮ್ಮ ಇಲಾಖೆಯಿಂದ ಸ್ಪರ್ಧಿಸಿ ರುವ ಅಭ್ಯರ್ಥಿಗೆ ಮಾತ್ರ ಮತದಾನ ಮಾಡಬೇಕು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.