ಉತ್ತರ ಪ್ರದೇಶ –
ತರಗತಿಯೊಳಗೆ ಮೊಬೈಲ್ ಫೋನ್ ಬಳಸಬೇಡಿ ಎಂದು ಹೇಳಿದ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡಿದೆದೆ. ಹೌದು ಸರ್ಕಾರಿ ಶಾಲಾ ಶಿಕ್ಷಕ ಕಂಪ್ಯೂಟರ್ ಶಿಕ್ಷಕ ಸಯ್ಯದ್ ವಾಸಿಕ್ ಅಲಿ ಎಂಬುವರ ಮೇಲೆ ಹಲ್ಲೆಯನ್ನು ಮಾಡಲಾಗಿದೆ.ಕ್ಲಾಸ್ ರೂಮ್ ನಲ್ಲಿ ಕೆಲವು ವಿದ್ಯಾರ್ಥಿಗಳು ಶಿಕ್ಷಕರೊಬ್ಬರನ್ನು ಮನಬಂದಂತೆ ಥಳಿಸಿದ್ದು ಈ ಒಂದು ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ .9ನೇ ತರಗತಿ ವಿದ್ಯಾರ್ಥಿಯೊಬ್ಬ ಇತರ ಇಬ್ಬರು ವಿದ್ಯಾರ್ಥಿಗ ಳೊಂದಿಗೆ, ಮೊಬೈಲ್ ಬಳಸುವುದನ್ನು ನಿಲ್ಲಿಸುವಂತೆ ಈ ಶಿಕ್ಷಕ ಹೇಳಿದ್ದಾರೆ.ಹೇಳಿದ ನಂತರ ವಾಸಿಕ್ ನ ಮುಖವನ್ನು ಕಪ್ಪು ಬಟ್ಟೆ ಬಳಸಿ ಮುಚ್ಚಿ ಹಲ್ಲೆ ನಡೆಸಿದನು.
ತರಗತಿಯಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿಲ್ಲಿಸುವಂತೆ ಕಂಪ್ಯೂಟರ್ ಶಿಕ್ಷಕ ಕೇಳಿದಾಗ ಕೆಲವು ವಿದ್ಯಾರ್ಥಿಗಳು ಅವರನ್ನು ಹೊಡೆದರು ಈಗಾಗಲೇ ಈ ಕುರಿತಂತೆ ಹಲ್ಲೆ ಮಾಡಿರುವ ಆರೋಪಿ ವಿದ್ಯಾರ್ಥಿಯನ್ನು ಬಂಧನ ಮಾಡಲಾಗಿದ್ದು. ಇತರ ಇಬ್ಬರು ವಿದ್ಯಾರ್ಥಿಗಳನ್ನು ಗುರುತಿಸಿದ ನಂತರ ಅವರ ವಿರುದ್ಧವೂ ಕ್ರಮ ತೆಗೆದುಕೊ ಳ್ಳಲಾಗುವುದು ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಓರ್ವ ಬಂಧಿಸಲಾಗಿದ್ದು, ಬಾಲಾಪರಾಧಿ ಗೃಹಕ್ಕೆ ಕಳುಹಿಸ ಲಾಗಿದೆ ವಾಸಿಕ್ ಸಲ್ಲಿಸಿದ ಲಿಖಿತ ದೂರನ್ನು ಆಧರಿಸಿ ಒಬ್ಬ ಹೆಸರಿನ ಮತ್ತು ಇಬ್ಬರು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಇನ್ನೂ ಇದರೊಂದಿಗೆ ಆರೋಪಿಗಳ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ