ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಕಾನೂನು ಮತ್ತು ಸುವ್ಯವಸ್ಥೆ ಯ ಹೊಸ ಡಿಸಿಪಿ ಯಾಗಿ ಸಾಹಿಲ್ ಬಾಗ್ಲಾ ಅಧಿಕಾರ ವಹಿಸಿ ಕೊಂಡರು.ಹೌದು ಇಂದು ಡಿಸಿಪಿ ಯಾಗಿದ್ದ ರಾಮರಾಜನ್ ವರ್ಗಾವಣೆ ಹಿನ್ನೆಲೆಯಲ್ಲಿ ಇಂದೇ ವರ್ಗಾವಣೆ ಗೊಂಡ ಸಾಹಿಲ್ ಬಾಗ್ಲಾ ಅವರು ಅಧಿಕಾರ ವಹಿಸಿಕೊಂಡರು
ಹೌದು ವರ್ಗಾವಣೆ ಗೊಂಡ ಡಿಸಿಪಿ ರಾಮರಾಜನ್ ಅವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೋಡಲಾಯಿತು ಪೊಲೀಸ್ ಆಯುಕ್ತ ಲಾಬೂರಾಮ್ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಗೌರವಿಸಿ ಆತ್ಮೀಯವಾಗಿ ಬೀಳ್ಕೊಟ್ಟರು
ಇನ್ನೂ ಇದೇ ವೇಳೆ ಹೊಸದಾಗಿ ವರ್ಗಾವಣೆ ಗೊಂಡು ಬಂದ ನೂತನ ಡಿಸಿಪಿ ಸಾಹಿಲ್ ಬಾಗ್ಲಾ ಅವರನ್ನು ಸ್ವಾಗತ ಮಾಡಲಾಯಿತು. ಇಂದಿನಿಂದ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗದ ಡಿಸಿಪಿ ಯಾಗಿ ಸಾಹಿಲ್ ಬಾಗ್ಲಾ ಅವರು ಕಾರ್ಯವನ್ನು ಮಾಡಲಿದ್ದಾರೆ.