ಬೆಂಗಳೂರು –
ಶಿಕ್ಷಕರ ವರ್ಗಾವಣೆ ಯಲ್ಲಿ ತಪ್ಪು ಮಾಹಿತಿಯನ್ನು ನೀಡಿ ಹೆಚ್ಚು ಅನುಕೂಲ ಅವಕಾಶವನ್ನು ಮಾಡಿಕೊಂಡ ವಿಚಾರ ಕುರಿತು ಪ್ರಕರಣ ಬೆಳಕಿಗೆ ಬಂದಿದೆ.ಹೌದು ಈ ಒಂದು ವಿಚಾರ ಕುರಿತು ಶಿಕ್ಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.’A’ ವಲಯದ ಶಾಲೆಯನ್ನು ‘C’ ವಲಯದ ಶಾಲೆ ಎಂದು EEDS ನಲ್ಲಿ ತಪ್ಪಾಗಿ ನಮೂದಿಸಿ ಇದರ ಮೂಲಕ ಶಿಕ್ಷಕರ ವರ್ಗಾವಣೆಯಲ್ಲಿ ಹೆಚ್ಚು ಆಧ್ಯತೆ ಮಾಡಿಕೊಂಡಿದ್ದು ಮಾಡಿಕೊಂಡಿದ್ದಾರೆ.ಅಲ್ಲದೆ ಇದರಿಂದ ವರ್ಗಾವಣೆ ಪಡೆದು ವರ್ಗಾವಣೆ ಪಡೆಯುವವರು ಕೂಡ ಇದ್ದಾರೆ ಎಂಬ ಅಂಶ ಬಯಲಾಗಿದೆ
ಸಧ್ಯ ಈ ಒಂದು ಕುರಿತು ಕೋಲಾರ ಡಿಡಿಪಿಐ ಅವರು ಆದೇಶವನ್ನು ಮಾಡಿದ್ದು ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ವರದಿ ನೀಡಬೇಕು ಹಾಗೇ ಸೂಕ್ತವಾದ ರೀತಿಯಲ್ಲಿ ಕ್ರಮ ವನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ