ಬೆಂಗಳೂರು –
ಇನ್ನೇನು ಕಡಿಮೆಯಾಯಿತು ಅನ್ನುವಷ್ಟರಲ್ಲಿಯೇ ಮತ್ತೆ ಕರೋನ ಹೆಚ್ಚಾಗಿದ್ದು ಹೀಗಾಗಿ ಹೊಸ ಹೊಸ ಮಾರ್ಗ ಸೂಚಿ ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಈ ನಡುವೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೆಲವೊಂದಿಷ್ಟು ನಿರ್ಣಯಗಳನ್ನು ತಗೆದುಕೊಂಡಿದ್ದು ಹೊಸ ವರ್ಷಾಚರಣೆ ಮತ್ತು ಕ್ರೀಸ್ ಮಸ್ ಹಬ್ಬದ ಆಚರಣೆಗೆ ಬ್ರೇಕ್ ಹಾಕಲು ಒಮ್ಮತದ ಅಭಿಪ್ರಾಯ ಕೇಳಿ ಬಂದಿದೆ
ಹೌದು ಕೊರೋನಾ ನಿಯಂತ್ರಣದ ಹಿನ್ನಲೆಯಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದ್ದು ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ತಡೆಗಟ್ಟ ಬೇಕು ಎಂಬ ಪ್ರಸ್ತಾಪ ಮೊನ್ನೆ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಬಂದಿದೆ.ಬಿಬಿಎಂಪಿಯೂ ಕೂಡ ಹೆಚ್ಚು ಜನ ಸೇರುವ ಕಾರ್ಯಕ್ರಮಗಳು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿ ಸಿದೆ. ಹಾಗಾಗಿ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಕಡಿವಾಣ ಹಾಕುವ ಸಾಧ್ಯತೆ ಕಂಡು ಬಂದಿದೆ.
ಕಳೆದ ಬಾರಿ ಕೊರೋನ ಎರಡನೇ ಅಲೆ ತೀವ್ರತೆ ಹೆಚ್ಚಿದ್ದ ಹಿನ್ನಲೆಯಲ್ಲಿ ಈ ಎರಡು ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿತ್ತು.ಈ ಬಾರಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಿದ್ದು ಅಧಿಕೃತವಾಗಿ ಆದೇಶ ಹೋರ ಬೀಳಲಿದೆ.