ಗ್ರಾಮ ಕುಸ್ತಿ ಅಖಾಡಕ್ಕೆ ಯುವ ಹೋರಾಟಗಾರ- ಹು-ಧಾ ಗ್ರಾಮೀಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ ಎಮ್ ಧರ್ಮಗೌಡರ ಮಾಹಾತ್ಮಾ ಗಾಂಧೀಜಿಯವರು ದೇಶದ ಅಭಿವೃದ್ಧಿ ಆಗಬೇಕಾದರೆ ಅದೂ ಗ್ರಾಮದ ಯುವಕರಿಂದಲೇ ಅಭಿವೃದ್ಧಿಯಿಂದಲ್ಲೇ ಆರಂಭವಾಗಬೇಕು ಎಂಬ ಮಾತು ನಾವು ನೀವು ಎಲ್ಲಾ ಓದೆ ಇರುತ್ತವೆ. ಈಗ ಮಹಾತ್ಮಾ ಗಾಂಧೀಜಿಯವರೇ ಅಂದು ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಈಗ ಅದೇ ಪಕ್ಷದಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಗುರುತಿಸಿಕೊಂಡು, ಹುಬ್ಬಳ್ಳಿ ಧಾರವಾಡ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಉತ್ಸಾಹಿ ತರುಣ ಕಾರ್ಯದರ್ಶಿಯಾಗಿರುವ ದೇವನಗೌಡ ಎಮ್ ಧರ್ಮಗೌಡರವರು.
ಈಗ, ಹತ್ತು ಹಲವು ಕನಸುಗಳನ್ನು ಇಟ್ಟುಕೊಂಡು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೊಂದಿಕೊಂಡಿರುವ ನೂಲ್ವಿ ಗ್ರಾಮ ಪಂಚಾಯತಿಯಿಂದ ಗ್ರಾಮ ಪಂಚಾಯತಿ ಚುನಾವಣೆ ಆಖಾಡಕ್ಕೆ ಇಳಿಯುತ್ತಿದ್ದಾರೆ.
ಇನ್ನೂ ಎರಡನೇ ಹಂತದಲ್ಲಿ ನೂಲ್ವಿ ಗ್ರಾಮಕ್ಕೆ ಚುನಾವಣೆ ನಡೆಯಲ್ಲಿದ್ದು, ಒಟ್ಟು ಹತ್ತೊಂಬತ್ತು ಸ್ಥಾನಗಳನ್ನು ಒಳಗೊಂಡಿದೆ. ಇನ್ನೂ ನೂಲ್ವಿ ಗ್ರಾಮದ ಎರಡನೇಯ ವಾರ್ಡನಿಂದ ದೇವನಗೌಡ ಎಮ್ ಧರ್ಮಗೌಡ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಗ್ರಾಮದ ಅಭಿವೃದ್ಧಿಗಾಗಿ, ಮೂಲಭೂತ ಸೌಕರ್ಯಗಳಿಗಾಗಿ ಹಲವು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಇವರು, ಈಗ ಆಡಳಿತಾತ್ಮಕವಾಗಿ ಗ್ರಾಮದ ಎರಡನೇ ವಾರ್ಡನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಕನಸು ಕಂಡಿದ್ದಾರೆ. ಈಗಾಗಲೇ ಗ್ರಾಮದ ಎರಡನೇ ವಾರ್ಡನಲ್ಲಿ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಮಾಡಲು ತಮ್ಮದೆಯಾದ ಯೋಜನೆಯನ್ನು ಧರ್ಮಗೌಡರು ಹಾಕಿಕೊಂಡಿದ್ದಾರೆ. 26 ವರ್ಷದ ಯುವಕರಾಗಿರುವ ಡಿ. ಎಂ. ಧರ್ಮಗೌಡರವರು ಹತ್ತನೆಯ ತರಗತಿಯನ್ನು ಓದಿಕೊಂಡಿದ್ದು. ನಂತರ ದಿನಗಳಲ್ಲಿ ತಮ್ಮ ಹತ್ತು ಹಲವು ಹೋರಾಟಗಳನ್ನು ಮಾಡುತ್ತಾ ಈಗ ಯುವಕರ ಕಣ್ಮಣಿಯಾಗಿ ಹಲವಾರು ಅಭಿವೃತ್ತಿ ಕಾರ್ಯಗಳು ಸಹಾಯದ ಕೆಲಸ ಮಾಡುತ್ತಾ ಕಾರ್ಯಗಳೊಂದಿಗೆ ಬೆಳೆದಿದ್ದಾರೆ. ಈಗಾಗಲೇ ಗ್ರಾಮದಲ್ಲಿ ತಮ್ಮದೆಯಾದ ವರ್ಚಸ್ಸು ಹೊಂದಿರುವ ದೇವನಗೌಡ ಧರ್ಮಗೌಡರವರು, ಗ್ರಾಮದ ಎರಡನೇ ವಾರ್ಡ್ ಜನತೆಗೆ ಹಲವು ಭರವಸೆಗಳನ್ನು ಮುಂದಿಟ್ಟಿದ್ದಾರೆ.
ಮೊದಲನೆಯದಾಗಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬೀದಿಗಳ ಸ್ವಚ್ಚತೆ, ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಉತ್ತಮ ವಾತಾವರಣಾ ನಿರ್ಮಾಣ. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆಯ ಕಡೆ ಗಮನ ಸೇರಿದಂತೆ ಹಲವು ಭರವಸೆಗಳನ್ನು ಈಗ ಮುಂದಿಟ್ಟುಕೊಂಡು ಚುನಾವಣೆ ಅಖಾಡಕ್ಕೆ ದೇವನಗೌಡ ಧರ್ಮಗೌಡರ ಮುಂದಾಗಿದ್ದಾರೆ. ಕುಟುಂಬದಲ್ಲಿ ಯಾರೊಬ್ಬರ ರಾಜಕೀಯ ಹಿನ್ನೆಲೆಯನ್ನು ಹೊಂದಿರದ ದೇವನಗೌಡರವರು, ತಮ್ಮದೆ ಪರಿಶ್ರಮದಿಂದ ಹಾಗೂ ಹೋರಾಟ ಮನೋಭಾವಬನ್ನು ಗುರುತಿಸಿ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ನಿರ್ದೇಶನದ ಮೇರೆಗೆ, ಹುಬ್ಬಳ್ಳಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನೀಲ ಕುಮಾರ ಪಾಟೀಲ್ ಅವರು, ದೇವನಗೌಡರನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿಯು ಹತ್ತು ಹಲವು ಹೋರಾಟಗಳನ್ನು ಮಾಡುತ್ತಲೇ ಬಂದಿರುವ ಇವರು ರಾಜಕೀಯವಾಗಿ ಕೂಡಾ ಎಲ್ಲ ರಾಜಕೀಯ ಮುಖಂಡರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಾಸಕರಿಂದ ಗ್ರಾಮ ಪಂಚಾಯತಿಗೆ ವಿಶೇಷ ಅನುದಾನ ತರುವು ಯೋಚನೆಯನ್ನು ಹೊಂದಿದ್ದು. ಹಾಗೇ ತಂದ ಅನುದಾನವನ್ನು ಗ್ರಾಮವನ್ನು ಮತ್ತಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಮನೋಭಾವವನ್ನು ಹೋದಿದ್ದಾರೆ.
ಇನ್ನೂ ದೇವು ಅವರು ಸ್ಪರ್ಧೆ ಮಾಡಬೇಕು ಎನ್ನುವ ಕ್ಷೇತ್ರದಲ್ಲಿ ಸುಮಾರು 700 ಮತಗಳನ್ನು ಹೊಂದಿದ್ದು, ವಾರ್ಡಿನ ಎಲ್ಲ ಯುವಕರು, ಅಕ್ಕ ತಂಗಿ , ಹಾಗೂ ಹಿರಿಯರ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇನ್ನೂ ಕ್ಷೇತ್ರದಲ್ಲಿಯು ದೇವು ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡಲು ಮತದಾರರು ಕೂಡಾ ಒತ್ತಾಯ ಮಾಡುತ್ತಲ್ಲೇ ಬಂದಿದ್ದು. ಆದರೆ ಸ್ಪರ್ಧೆಗೆ ಈ ಹಿಂದೆ ದೇವು ಧರ್ಮಗೌಡರವರು ಮುಂದೆಯಾಗಿರಲ್ಲಿಲ್ಲ. ಈಗ ಮತದಾರರು ಒತ್ತಾಯ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ ದೇವು ಧರ್ಮಗೌಡರವರು ನೂಲ್ಲಿಯ ಎರಡನೇಯ ವಾರ್ಡನಿಂದ ಚುನಾವಣೆಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ತಮ್ಮದೆಯಾದ ಹಿಡಿತ ಹೊಂದಿರುವ ಧರ್ಮಗೌಡರವರು ತಮ್ಮದೆಯಾದ ಲೆಕ್ಕಾಚಾರವನ್ನು ಹಾಕಿಕೊಂಡಿದ್ದು, ಈ ಬಾರಿ ಗ್ರಾಮದ ಎರಡನೇ ವಾರ್ಡನ್ ಸದಸ್ಯ ಎಂದೇ ದೇವು ಧರ್ಮಗೌಡರನ್ನು ಕರೆಯಲಾಗುತ್ತಿದೆ.
ಈಗಾಗಲೇ ಕರೋನಾ ಸಮಯದಲ್ಲಿ ಸಾಕಷ್ಟು ನೊಂದ ಜನರಿಗೆ ನೆರವಿನ ಹಸ್ತವನ್ನು ಚಾಚಿ ಅಲ್ಲದೇ ನೊಂದವರ ಬಾಳಿಗೆ ಬೆಳಕಾಗಿರುವ ಧರ್ಮಗೌಡರು ಈಗ ಸಮಾಜಕ್ಕೇ ನಮ್ಮಿಂದ ಏನಾದರೂ ಕೊಡುಗೆ ಇರಲಿ ಎಂದುಕೊಂಡು ಗ್ರಾಮ ಕುಸ್ತಿ ಅಖಾಡಕ್ಕೇ ಇಳಿಯುತ್ತಿದ್ದಾರೆ.
ಪ್ರಮುಖವಾಗಿ ಈ ಹಿಂದೆ ಕುಂದಗೋಳ ಉಪ ಚುನಾವಣೆಯಲ್ಲಿ ಪ್ರಮುಖವಾದ ಪಾತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ನೀಡಿದ್ದರು. ಅದನ್ನು ಇವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.
ಇವೆಲ್ಲದರ ಅನುಭವ ಗ್ರಾಮಕ್ಕೆ ಏನಾದರೂ ಒಂದು ಹೊಸ ಅಭಿವೃದ್ದಿ ಮಾಡಬೇಕು ಎಂಬ ಹುಮ್ಮಸ್ಸು ಜೊತೆಗೆ ಬೆನ್ನಿಗೆ ಯುವ ಪಡೆಯನ್ನು ಕಟ್ಟಿಕೊಂಡು ಹಗರು ರಾತ್ರಿ ಎನ್ನದೇ ಯಾರಾದರೂ ಏನೇ ಸಹಾಯ ಕೇಳಿದ್ರು ಅವರಿಗೆ ಸಹಾಯ ಮಾಡುತ್ತಾ ಸಧ್ಯ ಗ್ರಾಮದಲ್ಲಿ ಹೊಸ ಹೊಸ ಕನಸು ಯೋಜನೆಗಳೊಂದಿಗೆ ಸ್ಪರ್ಧೆ ಮಾಡುತ್ತಿರುವ ಇವರಿಗೆ ಈಗಾಗಲೇ ಸಾಕಷ್ಟು ಅನುಕಂಪ ಕಂಡು ಬರುತ್ತಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ದೇವು ಧರ್ಮಗೌಡರ ಹೋರಾಟದ ಮತ್ತು ಸಹಾಯದ ಗುಣವನ್ನು ನೋಡಿದ್ರೆ ನಿಜಕ್ಕೂ ಯಾರೇ ಬಂದು ಏನೇ ಕೇಳಿದ್ರು ಯಾವುದೇ ಸಮಸ್ಯೆಗಳನ್ನು ಹೊತ್ತುಕೊಂಡು ಬಂದ್ರೂ ನೆರವಾಗುತ್ತಾರೆ. ಇಂಥಹ ದೊಡ್ಡ ಗುಣದ ಧರ್ಮವಂತ ಧರ್ಮಗೌಡರಿಗೆ ಎರಡನೇಯ ವಾರ್ಡ್ ಮತದಾರರು ಅದರಲ್ಲೂ ಮುಖ್ಯವಾಗಿ ಗ್ರಾಮದ ಯುವಕರ ಹಿರಿಯರು
ಸಾಕಷ್ಟು ಪ್ರಮಾಣದಲ್ಲಿ ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೇಸ್ ಪಕ್ಷದ ಕುಂದಗೋಳ ಕ್ಷೇತ್ರದ ಶಾಸಕರು ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ ಸೇರಿದಂತೆ ಎಲ್ಲರೂ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇತ್ತ ಇವರನ್ನು ನಿಲ್ಲಲು ವಾರ್ಡ್ ನ ಮತದಾರರು ಕೂಡಾ ಹುಮ್ಮಸ್ಸು ನೀಡಿದ್ದು ಹೊಸ ಭರವಸೆ ಹೊಸ ಕನಸುಗಳೊಂದಿಗೆ ನಿಲ್ಲುತ್ತಿರುವವ ಇವರಿಗೆ ಒಳ್ಳೇಯದಾಗಲಿ .