ಧಾರವಾಡ –
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲೂಕ ಘಟಕದ ವತಿಯಿಂದ ಪದಾಧಿಕಾ ರಿಗಳ ನಿಯೋಗ ಅಧ್ಯಕ್ಷರಾದ ಗುರು ತಿಗಡಿ ನೇತೃತ್ವದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬಮ್ಮಕ್ಕ ನವರ್ ಭೇಟಿ ಮಾಡಿ ಶಿಕ್ಷಕರ ಸೇವಾ ಸೌಲಭ್ಯ ಗಳು ಮತ್ತು ಮಕ್ಕಳ ಶಿಕ್ಷಣ ಕುರಿತಾದ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚಿಸಿ ಮನವಿ ಸಲ್ಲಿಸಲಾಯಿತು.

ಹೌದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ರಿಯಾಶೀಲ ಕಾರ್ಯಚಟು ವಟಿಕೆಗಳನ್ನು ಅಭಿನಂದಿಸಲಾಯಿತು.ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ
ಸ್ಪಂದನ ಬಹಳ ವರ್ಷಗಳ ಬೇಡಿಕೆ ಇದ್ದು,
ವಾರಕ್ಕೆ ಎರಡು ಕ್ಲಸ್ಟರ್ ಗಳಂತೆ ವೇಳಾಪಟ್ಟಿ ತಯಾರಿಸಿ
ಗುರು ಸ್ಪಂದನ ಕಾರ್ಯಕ್ರಮವನ್ನು ಮಾರ್ಚ್ 31ರೊಳಗೆ ಮಾಡುತ್ತೇವೆ.ಶಾಲೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವೆ.ಪ್ರಧಾನ ಗುರುಗಳ ಪ್ರಭಾರಿ ಭತ್ಯೆ, ಜಿಪಿಟಿ ಮತ್ತು ಇತರೆ ಶಿಕ್ಷಕರ ಅರಿಯರ್ಸ್, ವೇತನ ಬಡ್ತಿ ಕಾಲಮಿತಿ ಬಡ್ತಿ ಸೇರಿದಂತೆ ಎಲ್ಲ ಅರಿಯರ್ಸ್ ಆಗುವಂತೆ ಕ್ರಮವಹಿಸುವೆ
ಎಂದರು




ತಾಲೂಕಿನ ಉತ್ತಮ ಪ್ರಧಾನ ಗುರುಗಳ ಸಹಕಾರ
ದಿಂದ ಮುಖ್ಯ ಶಿಕ್ಷಕರಿಗೆ ಆಡಳಿತಾತ್ಮಕ ತರಬೇತಿ ವ್ಯವಸ್ಥೆ, ಡಿಬಿಟಿ ಕುರಿತು ವಾಸ್ತವಿಕ ಸಮಸ್ಯೆಗಳನ್ನು ಚರ್ಚಿಸಿ,ಪರಿಹಾರಕ್ಕೆ ಪದಾಧಿಕಾರಿಗಳಿಂದ ಅಗತ್ಯ ಸಲಹೆಗಳನ್ನು ಪಡೆದರು. ಶಾಲಾ ಕುಡಿಯುವ ನೀರು ಶೌಚಾಲಯ ನಿರ್ವಹಣೆ ಅನುದಾನ ಹಾಗೂ ಶಿಕ್ಷಕರ ಸಾದಿಲ್ವಾರು ಮತ್ತು ಮಕ್ಕಳ ಶಾಲಾ ಫಿ ರಿಯಾಯಿತಿ ಹಣವನ್ನು ಎಚ್.ಎಮ್ ಖಾತೆಗೆ ಜಮೆ ಮಾಡಲಾಗು
ವುದು.ಸಂಪನ್ಮೂಲ ವ್ಯಕ್ತಿಗಳು ಮತ್ತು ಕೋವಿಡ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಲಭ್ಯ ಮಾಹಿತಿಯಂತೆ ಗಳಿಕೆ ರಜೆ ಮಂಜೂರು ಮಾಡಿರುವೆ. ಪ್ರಧಾನ ಗುರುಗಳ ಪ್ರಭಾರಿ ಭತ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ತಮ್ಮ ಸಹಕಾರ, ಬೆಂಬಲದಿಂದ ಹಂತ ಹಂತವಾಗಿ ಕ್ರಮ ವಹಿಸುವುದಾಗಿ ತಿಳಿಸಿದರು.



ಅಕ್ಷಯಪಾತ್ರೆ ಆಹಾರಧಾನ್ಯಗಳ ಸಮರ್ಪಕ ವಿತರಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವೆ
ಎಂದ
ರು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಪಂದಿಸಿದರು. ಸಂಘದ ನಿಯೋಗದಲ್ಲಿ ರಾಜ್ಯಪ್ರಧಾನ ಕಾರ್ಯದರ್ಶಿ ಶಂಕರ್ ಘಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಗಂಗವ್ವ ಕೋಟಿ ಗೌಡ್ರ, ಜಿಲ್ಲಾ ಕೋಶಾಧ್ಯಕ್ಷರಾದ ಶ್ರೀಮತಿ ಭಾರತೀಯ ಸಾಧನಿ, ತಾಲೂಕ್ ಅಧ್ಯಕ್ಷರಾದ ಕಾಶಪ್ಪ ದೊಡವಾಡ, ಗೌರವಾಧ್ಯಕ್ಷರಾದ
ಅಲ್ಲಾಭಕ್ಷ್ ನದಾಫ್, ಕಾರ್ಯದರ್ಶಿ
ಚಂದ್ರಶೇಖರ ತಿಗಡಿ, ಖಜಾಂಚಿ ಚಿದಾನಂದ ಹೂಲಿ, ಸಹಕಾರಿ ಸಂಘದ ನಿರ್ದೇಶಕರಾದ ರಾಜು ಮಾಳವಾಡ
ಎಚ್ಎಫ್ ಜಿಲ್ಲೆ ನವರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಡಿ.ಎಂ ಕಮ್ಮಾರ್, ಪದಾಧಿಕಾರಿಗಳಾದ
ಕೆ.ಎಸ್ ಹಿರೇಮಠ, ಶ್ರೀಮತಿ ಜಿ.ಟಿ ಹುಡೇದ,ಪಕೀರಪ್ಪ ಮಡಿವಾಳರ್,ರಮೇಶ್ ಸಣ್ಣಮನಿ,ಹನುಮಂತ ಡೊಕ್ಕನವರ,ಜಿ.ಎಸ್ ದೇಸಾಯಿ ಮುಂತಾದವರು ಹಾಜರಿದ್ದರು
.
???????????