ಹುಬ್ಬಳ್ಳಿ –
ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿರುವ ಸಾರಿಗೆ ನೌಕರರ ಪ್ರತಿಭಟನೆಗೆ ಹುಬ್ಬಳ್ಳಿ ಧಾರವಾಡದಲ್ಲೂ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಹೋರಾಟಗಾರರ ಬಂಧನ ಮತ್ತು ಹೋರಾಟಕ್ಕೇ ಸ್ಪಂದಿಸದ ಸರ್ಕಾರದ ಧೋರಣೆಯ ವಿರುದ್ದ ಹುಬ್ಬಳ್ಳಿ ಧಾರವಾಡದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದೆ.
ಬೆಳ್ಳಂ ಬೆಳಿಗ್ಗೆ ಸಾರಿಗೆ ನೌಕರರು ಹುಬ್ಬಳ್ಳಿ ಧಾರವಾಡದಲ್ಲಿ ಪ್ರತಿಭಟನೆಗೆ ಇಳಿದರು. ಕರ್ತವ್ಯದ ಮೇಲಿದ್ದ ಕರ್ತವ್ಯಕ್ಕೇ ತೆರಳಿದ ಹೋಗುತ್ತಿರುವ ಹೀಗೆ ಎಲ್ಲರೂ ದಿಢೀರನೆ ಬಸ್ ಗಳನ್ನು ಡಿಪೋ ಒಳಗೆ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಸೇರಿದ ಎಲ್ಲಾ ಚಾಲಕರು ನಿರ್ವಾಹಕರು ಬಸ್ ಗಳನ್ನು ನಿಲ್ಲಿಸಿ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಹೋರಾಟಕ್ಕೇ ಬೆಂಬಲ ನೀಡುತ್ತಾ ಬೆಂಗಳೂರಿನಲ್ಲಿ ಹೋರಾಟಗಾರರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ನೌಕರರು ಕೂಡಲೇ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ. ಹುಬ್ಬಳ್ಳಿಯ ಎಲ್ಲಾ ಡಿಪೋ ಹಾಗೇ ಇತ್ತ ಧಾರವಾಡದಲ್ಲೂ ಕೂಡಾ ಎಲ್ಲಾ ಸಾರಿಗೆ ನೌಕರರು ಬಸ್ ನಿಲ್ಲಿಸಿ ಹೋರಾಟಕ್ಕಿಳಿದಿದ್ದಾರೆ. ಇನ್ನೂ ದಿಢೀರನೇ ಬಸ್ ಗಳ ಸಂಚಾರ ಬಂದ್ ಆಗುತ್ತಿದ್ದಂತೆ ಸಾರ್ವಜನಿಕರು ಪರದಾಡುತ್ತಿರುವ ಚಿತ್ರಣ ಕಂಡು ಬಂದಿತು. ಅವಳಿ ನಗರದಲ್ಲಿ ಸಾರ್ವಜನಿಕರ ಪರದಾಟ ಎಲ್ಲೇಡೆ ಕಂಡು ಬಂದಿತು. ಬೆಳ್ಳಂ ಬೆಳಿಗ್ಗೆ ಕಚೇರಿಗೆ ಊರಿಗೆ ಬೇರೆ ಬೇರೆ ಕೆಲಸಕ್ಕೆ ಹೋಗುವ ಪ್ರಯಾಣಿಯಕ ಪರದಾಟ ಎಲ್ಲೇಡೆ ಕಂಡು ಬಂದಿತು. ಇನ್ನೂ ಸಾರಿಗೆ ನೌಕರರ ಪ್ರತಿಭಟನೆಯ ವಿಷಯ ತಿಳಿದ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.