ಬೆಂಗಳೂರು –
ಬಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣದ ಬಗ್ಗೆ ಸಂಪೂರ್ಣ ತೆನಿಖೆ ಆಗಬೇಕು ಹಾಗೇ ಈ ಹಿಂದೆಯೂ ಶಿವಮೊಗ್ಗದಲ್ಲಿ ಈ ರೀತಿಯ ಘಟನೆಗಳು ಆಗಿದ್ದು ಸರ್ಕಾರದ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಮುಸ್ಲಿಂ ಗುಂಡಾಗಳು ಕೊಲೆ ಹಿಂದೆ ಇದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ ಅಂದ್ರೆ ಅದು ಗಂಭೀರ ವಾದ ಸಂಗತಿ.ಆ ದಿಕ್ಕಿನತ್ತ ತನಿಖೆ ಮಾಡಬೇಕು.ಎಲ್ಲಾ ಗುಂಡಾಗಳನ್ನು ಬಂಧಿಸಿ ಒಳಗೆ ಹಾಕಬೇಕೆಂದರು.ಇನ್ನೂ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಮಧ್ಯಂತರ ತೀರ್ಪುನ್ನು ಎಲ್ಲರೂ ಪಾಲನೆ ಮಾಡಬೇಕು ಯಾರು ಮಧ್ಯಂತರ ತೀರ್ಪುನ್ನ ಪಾಲನೆ ಮಾಡೋದಿಲ್ಲ ಅವರಮೇಲೆ ನಿರ್ಧ್ಯಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಈಗ ಸಂಬಾಳಿಸುವ ಸಮಯ ಮಯಗಿದಿದೆ.ಹೈಕೋರ್ಟ್ ತೀರ್ಪುನ್ನ ಪಾಲನೆ ಮಾಡೋದಿಲ್ಲ ಅಂದರೆ ಉದ್ಧಟತನ.ನ ಅದನ್ನು ಸರ್ಕಾರ ಸಹಿಸೋದಿಲ್ಲ ತೀರ್ಪುನ್ನ ಯಾರು ಪಾಲಿಸೋದಿಲ್ಲವೋ ಅವರನ್ನ ಒದ್ದು ಒಳಗೆ ಹಾಕಬೇಕು ಎಂದರು.ಗೃಹ ಇಲಾಖೆ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಒಂದು ಕೊಲೆಯಾಗಿದೆ ಅಂತ ಸರ್ಕಾರ ವಿಫಲವಾಗಿದೆ ಗೃಹ ಸಚಿವರು ವಿಫಲವಾಗಿದ್ದಾರೆ ಅಂತ ಹೇಳೋದಲ್ಲ.ಇದರ ತನಿಖೆಯನ್ನು ಸಂಪೂರ್ಣವಾಗಿ ಮಾಡಬೇಕು. ತಪ್ಪಿತಸ್ಥ ರನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ ಧರಣಿ ಮಾಡುವ ಹಕ್ಕಿದೆ ಮಾಡಲಿ,ಆದರೆ ಯಾಕೆ ಹೋರಾಟ ಮಾಡುತ್ತಿದ್ದಾರೆ ಕಾಂಗ್ರೆಸ್ ಗೆ ಹೈಕೋರ್ಟ್ ತೀರ್ಪಿನ ಬಗ್ಗೆ ಒಂದು ಸ್ಪಷ್ಟತೆ ಇಲ್ಲ.ಹೈಕೋರ್ಟ್ ತಿರ್ಪು ಪಾಲನೆ ಮಾಡಬೇಕಾ ಮಾಡಬಾರದ ಅನ್ನೋ ಸ್ಪಷ್ಟತೆ ಇಲ್ಲ.ಕಾಂಗ್ರೆಸ್ ಗೆ ಇವತ್ತು ಬೇರೆ ಯಾವುದೇ ಇಲ್ಲ ಇಲ್ಲ.ಕಾಂಗ್ರೆಸ್ ಗೆ ಹಿಜಾಬ್ ವಿಚಾರದಲ್ಲಿ ಮುಸ್ಮಾನರ ಪರವಾಗಿ ತಗೆದುಕೊಳ್ಳಬೇಕಾ ಅಥವ ವಿರುದ್ಧ ತಗೆದುಕೊ ಳ್ಳಬೇಕಾ ಅನ್ನೋ ಕನ್ಫ್ಯೂಷನ್ ನಲ್ಲಿದೆ. ಕಾಂಗ್ರೆಸ್ ಪಾರ್ಟಿ ರಾಷ್ಟ್ರಮಟ್ಟದಲ್ಲಿ ಒಂದು ಕನ್ಫ್ಯೂ ಸ್ ಡ್ ಪಾರ್ಟಿ, ಕನ್ಫ್ಯೂ ಷನ್ ಲೀಡರ್ಸ್ ಎಂದರು.ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರತಿದಿನ ಜಗಳವಾಡ್ತಿದ್ದಾರೆ.ಕಾಂಗ್ರೆಸ್ ಹೈಕೋರ್ಟ್ ತೀರ್ಮಾನ ಪಾಲನೆ ಮಾಡಬೇಕು ಎಂದು ಬಾಯಿ ಬಿಟ್ಟು ಹೇಳಲಿ ನೋಡಣ. ಹೇಳಿದರೆ ಮುಸ್ಲಿಂ ವೋಟ್ ಕೈತಪ್ಪುತ್ತೆ ಅನ್ನೋ ಭಯ ಕಾಂಗ್ರೆಸ್ ಗಿದೆ ಹಿಜಾಬ್ ವಿಚಾರದಲ್ಲಿ ಅವರ ನಿಲುವು ಏನು ಅನ್ನೋದನ್ನ ಮೊದಲು ತಿಳಿಸಲಿ ಎಂದು ಸವಾಲು ಹಾಕಿದರು.